ಸಿಡ್ನಿ: ಭಾನುವಾರ ಭಾರತದ ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪ್ರೇಕ್ಷಕರ ಗುಂಪೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿತ್ತು. ನಂತರ ಭದ್ರತಾ ಸಿಬ್ಬಂದಿ 6 ಮಂದಿಯನ್ನು ಮೈದಾನದಿಂದ ಹೊರ ಹಾಕಿ ನ್ಯೂ ಸೌತ್ ವೇಲ್ಸ್ ಪೊಲೀಸರಿಗೆ ಒಪ್ಪಿಸಿದ್ದರು.
ಈ ಘಟನೆಯನ್ನು ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಖಂಡಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಆಟಗಾರರ ಮೇಲೆ, ವಿಶೇಷವಾಗಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಖಂಡನಿಯ. ಪ್ರೇಕ್ಷಕರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
https://www.instagram.com/p/CJ7lbFCLT5e/?utm_source=ig_embed
ಮೊಹಮ್ಮದ್ ಸಿರಾಜ್ ಅವರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಖಂಡನಿಯ. ಸಿರಾಜ್ ಮತ್ತು ಭಾರತೀಯ ತಂಡವನ್ನು ನಾನು ಕ್ಷಮೆ ಕೇಳುತ್ತೇನೆ. ಪ್ರೇಕ್ಷಕರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ನಮ್ಮ ದೇಶದ ಜನರಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ” ಎಂದು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
“ಭಾರತ ತಂಡ ಪಂದ್ಯ ಡ್ರಾ ಮಾಡಿಕೊಳ್ಳೋದಕ್ಕಾಗಿ ಕಠಿಣವಾಗಿ ಹೋರಾಡಿದ ರೀತಿ ನನಗೆ ಮೆಚ್ಚುಗೆ ಆಯಿತು, ಭಾರತಕ್ಕೆ ಅಭಿನಂದನೆಗಳು. ಅದಕ್ಕಾಗಿಯೇ ನಾವು ಈ ಆಟವನ್ನು ಪ್ರೀತಿಸುತ್ತೇವೆ, ಅದು ಸುಲಭವಲ್ಲ. ನಿರ್ಣಾಯಕ ಪಂದ್ಯಕ್ಕಾಗಿ ಈಗ ಬ್ರಿಸ್ಬೇನ್ಗೆ ತೆರಳಲಿದ್ದೇವೆ ” ಎಂದು ಅವರು ಹೇಳಿದರು.