ಡಿಸೆಂಬರ್ ತ್ರೈಮಾಸಿಕ ನಿವ್ವಳ ಲಾಭ ಶೇ 7.2ರಷ್ಟು ಏರಿಕೆ ಕಂಡ ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಷೇರು ಮೌಲ್ಯ ಸೋಮವಾರ ಶೇ 3ರಷ್ಟು ಏರಿಕೆ ಕಂಡಿದೆ.
ಶೇ 3.32 ರಷ್ಟು ಏರಿಕೆ ಕಂಡು ಷೇರು ದರ 3,224 ರೂ.ಗೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕದಲ್ಲಿ ಶೇ 3.49ರಷ್ಟು ಏರಿಕೆ ಕಂಡು 3,230 ರೂ.ಗೆ ತಲುಪಿದ್ದು, ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ.
ಬಿಎಸ್ಇಯ ಬೆಳಗಿನ ವಹಿವಾಟಿನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 12,09,768 ಕೋಟಿ ರೂ.ಗೆ ಏರಿದೆ. ದೇಶದ ಅತಿದೊಡ್ಡ ಸಾಫ್ಟ್ವೇರ್ ಸೇವಾ ಸಂಸ್ಥೆ ಶುಕ್ರವಾರ ಡಿಸೆಂಬರ್ 2020ರ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ಲಾಭ ಶೇ 7.2ರಷ್ಟು ಏರಿಕೆ ಕಂಡು 8,701 ಕೋಟಿ ರೂ.ಗೆ ತಲುಪಿತ್ತು. ಇದು ಹಿಂದಿನ ವರ್ಷದಲ್ಲಿ 8,118 ಕೋಟಿ ರೂ. ನಿವ್ವಳ ಲಾಭ ಹೊಂದಿತ್ತು ಎಂದು ಟಿಸಿಎಸ್ ನಿಯಂತ್ರಕರಿಗೆ ತಿಳಿಸಿದೆ.
ಪರಿಶೀಲನೆಯ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯವು ಶೇ 5.4ರಷ್ಟು ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ 39,854 ಕೋಟಿ ರೂ.ಗಳಿಂದ 42,015 ಕೋಟಿ ರೂ.ಗೆ ತಲುಪಿದೆ. ಒಂಬತ್ತು ವರ್ಷಗಳಲ್ಲಿ ಇದು ಡಿಸೆಂಬರ್ ತ್ರೈಮಾಸಿಕದ ಪ್ರಬಲ ಬೆಳವಣಿಗೆಯಾಗಿದೆ.