ಅವರೇ ಮೇಳ ಅಂದ್ರೆ ನೆನಪಿಗೆ ಬರೋದು ವಿವಿಪುರಂನ ಸಜ್ಜನ್ ರಾವ್ ಸರ್ಕಲ್ ಬಳಿ ಇರುವ “ಶ್ರೀ ವಾಸವಿ ನಾಮಾಂಕಿತ ಅವರೆಕಾಳು ಮೇಳ”. ಈ ಅವರೆ ಮೇಳವನ್ನ ನಿರಂತರವಾಗಿ 21 ವರ್ಷಗಳ ಕಾಲ ನಡೆಸಿಕೊಂಡು ಬಂದಿದ್ದು ಈ ವರ್ಷವೂ ಕೂಡ ಹತ್ತು ದಿನಗಳ ಕಾಲ ನಡೆಯುತ್ತಿದೆ. ನಗರದ ಜನತೆ ತಿಂಡಿತಿನಿಸುಗಳನ್ನು ತೆಗೆದುಕೊಳ್ಳಲು ಪ್ರತಿವರ್ಷದಂತೆ ಈ ವರ್ಷವೂ ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದಿರುವುದು ಹೊಸದೇನಲ್ಲ. ಹಿರಿಯ ನಟಿ ತಾರಾ ಅವರು ಕೂಡ 21ವರ್ಷಗಳಿಂದ ಈ ಅವರೆ ಮೇಳದಲ್ಲಿ ಭಾಗಿಯಾಗಿದ್ದಾರೆ.ಪ್ರತಿವರ್ಷದಂತೆ ಈ ವರ್ಷವೂ ಕೂಡ ಮೇಳದಲ್ಲಿ ಭಾಗಿಯಾಗಿದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಅವರೆ ಮೇಳದ ರೂವಾರಿಯಾದ ಗೀತಾ ಅವರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ.ಅಲ್ಲದೇ ಅವರೆ ಮೇಳದಲ್ಲಿ ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಅವರೆ ಮೇಳದ ಸೊಬಗನ್ನು ಹೆಚ್ಚಿಸುತ್ತಿದೆ.