ದೇಶ ವಿದೇಶದಲ್ಲಿ ಕೋಟ್ಯಂತರ ಪಡ್ಡೆ ಹೈಕಳ ನಿದ್ದೆ ಕದ್ದವರು ಸನ್ನಿ ಲಿಯೋನ್. ಮೊದ ಮೊದಲು ವಯಸ್ಕರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಇದೀಗ ಬಾಲಿವುಡ್ ಅಂಗಳದಲ್ಲಿ ಮಿಂಚನ್ನು ಹರಿಸುತ್ತಿದ್ದಾರೆ. ಅಲ್ಲದೆ ತಮ್ಮ ಮಾದಕ ಮೈಮಾಟದಿಂದ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ .. ಬಾಲಿವುಡ್ ಮಾತ್ರವಲ್ಲದೆ ಟಾಲಿವುಡ್, ಸ್ಯಾಂಡಲ್ವುಡ್ ನಲ್ಲೂ ಕಾಣಿಸಿಕೊಂಡಿರುವ ಸನ್ನಿ ಲಿಯೋನ್ ಅವರನ್ನು ಪಡ್ಡೆ ಹುಡುಗರು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅರೇ ಬರೇ ಬಟ್ಟೆಗಳನ್ನು ಹಾಕುತ್ತಾ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿರುವ ಸನ್ನಿ, ಇದರ ಜೊತೆಗೆ ಸಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಾ ಶ್ಲಾಘನೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಗಲೂ ಸನ್ನಿ ಸೊಂಟವನ್ನು ಬಳುಕುವ ಬಳ್ಳಿಯಂತೆ ಬಳಸುತ್ತಾರೆ. ಐಟಂ ಸಾಂಗ್ ನಲ್ಲಿ ಅವರ ಸೊಂಟದ ಬಳುಕಿಗೆ ಸೋಲದೆ ಉಳಿಯುವರೆ ಇಲ್ಲ..
ಇದೀಗ ಸನ್ನಿಗೆ ೩೮ ವರುಷವಾಗಿದ್ದರು, ತಮ್ಮ ದೇಹದ ಮೈಮಾಟದ ಮಾದಕತೆಯನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.. ಹೌದು, ವಯಸ್ಸು ಮೂವತ್ತು ದಾಟಿದರೂ, ತಮ್ಮ ದೇಹದ ಕಾಂತಿಯನ್ನು ಹಾಗೇ ಉಳಿಸಿಕೊಳ್ಳಲು ಸನ್ನಿ ಪ್ರತಿ ದಿನ ಕಠಿಣ ವ್ಯಾಯಾಮವನ್ನು ತಪ್ಪದೇ ಮಾಡುತ್ತಾರೆ.ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಇಂದು ತಾವು ಮಾಡುತ್ತಿರುವ ವ್ಯಾಯಾಮದ ವೀಡಿಯೊ ವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿರುವ ಸನ್ನಿ ಲಿಯೋನ್, ತಲೆಕೆಳಗಾಗಿ ನಿಂತು ಮಾಡುವ ವ್ಯಾಯಾಮ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
ತಾವು ವ್ಯಾಯಾಮ ಮಾಡುತ್ತಿರುವ ವೀಡಿಯೊ ಒಂದನ್ನು ಸಹ ಬಿಡುಗಡೆ ಮಾಡಿರುವ ಸನ್ನಿ ಲಿಯೋನ್ ‘ಸೂಪರ್ ಹಾಟ್ ಸನ್ನಿ ಮಾರ್ನಿಂಗ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ತಮ್ಮ ವರ್ಕೌಟ್ ಬಗೆಗಿನ ಸೀಕ್ರೆಟ್ ಗಳನ್ನು ತಮ್ಮ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.. ಪಡ್ಡೆ ಹುಡುಗರ ಹಾಟ್ ಫೇವರಿಟ್ ರಾಣಿ ಸನ್ನಿ ಲಿಯೋನ್ ನ ಮಾದಕ ಮೈಮಾಟಕ್ಕೆ ಕಾರಣ ಕೇವಲ ವ್ಯಾಯಾಮ ಮಾತ್ರವಲ್ಲ.ಆಹಾರ ಪಥ್ಯವೂ ಹೌದು. ಉತ್ತಮವಾಗಿ ಅಡುಗೆ ಮಾಡಬಲ್ಲ ಸನ್ನಿ ತಿನ್ನುವ ವಿಚಾರದಲ್ಲಿ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ. ಆದರೆ ಜ್ಯೂಸ್ ಕುಡಿಯುವ ವಿಚಾರದಲ್ಲಿ ಧಾರಾಳ ಮನೋಭಾವವನ್ನು ಹೊಂದಿರುವ ಅವರು ದಿನ ಆರಂಭವಾಗುವಾಗಲೇ ಎಳನೀರು ಸೇವನೆ ಮಾಡುತ್ತಾರೆ.
ಪ್ರಸ್ತುತ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿರುವ ಸನ್ನಿ, ತೆಲುಗಿನಲ್ಲಿ ನಟಿಸಿರುವ ವೀರ ಮಹಾದೇವಿ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಸಂತೋಷ್ ನಾಯರ್ ನಿರ್ದೇಶನದ ರಂಗೀಲಾ ಚಿತ್ರ ಕೂಡಾ ಅಕ್ಟೋಬರ್ ತಿಂಗಳಿನಲ್ಲಿ ತೆರೆಗೆ ಅಪ್ಪಳಿಸಲಿದೆ. ಒಟ್ಟಾರೆ ವಯ್ಯಸ್ಸು ಕಳೆಯುತ್ತಿದ್ದರು, ತಮ್ಮ ದೇಹ ಕಾಂತಿಯನ್ನು ಹಾಗೇ ಉಳಿಸಿಕೊಂಡಿರುವ ಸನ್ನಿ ತಮ್ನ ಹಾಟ್ ಲುಕ್ ನಿಂದ ಕೋಟ್ಯಂತರ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.