ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಹಲವು ದಾಖಲೆ ಬರೆದ ಶಿಖರ್ ಧವನ್

ಕೊಲಂಬೋ: ಭಾರತ ಕ್ರಿಕೆಟ್ ತಂಡದ ನಾಯಕ ಶಿಖರ್ ಧವನ್ ಏಕದಿನ ಕ್ರಿಕಟ್‍ನಲ್ಲಿ ಆರಂಭಿಕನಾಗಿ 10 ಸಾವಿರ ರನ್ ಬಾರಿಸುವ ಮೂಲಕ ನೂತನ ಮೈಲಿಗಲ್ಲು ಸಾಧಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧವನ್ 86ರನ್(95 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದ್ದರು. ಇದೇ ಪಂದ್ಯದಲ್ಲಿ 10,000ರನ್ ಮೈಲಿಗಲ್ಲು ನೆಟ್ಟಿದ್ದಾರೆ.

ಈ ಮೂಲಕ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್ ಹಾಗೂ ರೋಹಿತ್ ಶರ್ಮಾ ಬಳಿಕ ಆರಂಭಿಕನಾಗಿ 10 ಸಾವಿರ ರನ್ ಸಿಡಿಸಿದ ಭಾರತದ 5 ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ ಧವನ್ ಶ್ರೀಲಂಕಾ ವಿರುದ್ಧ 1000 ರನ್ ಪೂರೈಸಿ ಸಂಭ್ರಮಪಟ್ಟರು. ಅದಾದ ಬಳಿಕ ಏಕದಿನ ಕ್ರಿಕೆಟ್‍ನಲ್ಲಿ 6,000 ರನ್ ಸಿಡಿಸಿದ 10 ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.

ಏಕದಿನ ಕ್ರಿಕೆಟ್‍ನಲ್ಲಿ ಈವರೆಗೆ ಭಾರತ ತಂಡದ ಆಟಗಾರರರಾದ ಸಚಿನ್ ತೆಂಡೂಲ್ಕರ್ 18,426ರನ್, ವಿರಾಟ್ ಕೊಹ್ಲಿ 12,169ರನ್, ಸೌರವ್ ಗಂಗೂಲಿ 11,363ರನ್, ರಾಹುಲ್ ದ್ರಾವಿಡ್ 10,889ರನ್, ಎಂ.ಎಸ್ ಧೋನಿ 10,773ರನ್, ಮೊಹಮ್ಮದ್ ಅಜರುದ್ದೀನ್ 9,378ರನ್, ರೋಹಿತ್ ಶರ್ಮಾ 9,205ರನ್, ಯುವರಾಜ್ ಸಿಂಗ್ 8,701 ಮತ್ತು ವಿರೇಂದ್ರ ಸೆಹ್ವಾಗ್ 8,273ರನ್ ಇದೀಗ ಧವನ್ 6,063 ಸಿಡಿಸಿದ್ದಾರೆ. ಅದಲ್ಲದೆ ಅತೀ ವೇಗವಾಗಿ 6,000ರನ್ ಸಿಡಿಸಿದ ಎರಡನೇ ಆಟಗಾರನಾಗಿ ಧವನ್ ಗುರುತಿಸಿಕೊಂಡಿದ್ದಾರೆ.

Share