ಟಿ-20 ವಿಶ್ವಕಪ್​, ದೇಶೀ ಟೂರ್ನಿ :2028 ಒಲಿಂಪಿಕ್ಸ್​ ಅಜೆಂಡಾ ಇಟ್ಟುಕೊಂಡು ಏಪ್ರಿಲ್ 16ರಂದು ಬಿಸಿಸಿಐ ಸಭೆ

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಏಪ್ರಿಲ್​ 16ರಂದು 7ನೇ ಅಪೆಕ್ಸ್​ ಕೌನ್ಸಿಲ್ ಸಭೆ ನಡೆಸಲಿದೆ. ಇದರಲ್ಲಿ ಟಿ-20 ವಿಶ್ವಕಪ್, ದೇಶೀಯ ಆವೃತ್ತಿ ಮತ್ತು 2028ರ ಲಾಸ್ ಏಂಜಲೀಸ್​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಭಾಗವಹಿಸುವಿಕೆಯೇ ಪ್ರಮುಖ ಅಜೆಂಡಾಗಳಾಗಲಿವೆ ಎಂದು ತಿಳಿದು ಬಂದಿದೆ.

ಮೇಲೇ ತಿಳಿಸಿರುವ ಅಂಶಗಳ ಜೊತೆಗೆ ತೆಲಂಗಾಣ ಕ್ರಿಕೆಟ್​ ಅಸೋಸಿಯೇಷನ್ ಪ್ರಾತಿನಿಧ್ಯದ ಕುರಿತು ಚರ್ಚೆ​ ಮತ್ತು ಜಮ್ಮು ಕಾಶ್ಮೀರ್​ ಕ್ರಿಕೆಟ್​ ಅಸೋಸಿಯೇಷನ್​ ಕುರಿತಾದ ಚರ್ಚೆಯೂ ನಡೆಯಲಿದೆ ಎಂದು ಎಎನ್​ಐಗೆ ದೊರತಿರುವ ಪತ್ರದಲ್ಲಿ ಬಿಸಿಸಿಐ ತಿಳಿಸಿದೆ.

ಇದೇ ಸಂದರ್ಭದಲ್ಲಿ ತಮಿಳುನಾಡು, ಕರ್ನಾಟಕ ಸೌರಾಷ್ಟ್ರ ಸೇರಿದಂತೆ ಕೆಲವು ರಾಜ್ಯ ಕ್ರಿಕೆಟ್​ ಸಂಸ್ಥೆಗಳು ಸ್ಥಳೀಯ ಟಿ-20 ಲೀಗ್ ಆಯೋಜನೆ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

Share

Leave a Reply

Your email address will not be published.