ಶ್ರೀಲಂಕಾ-ಟೀಮ್ ಇಂಡಿಯಾ ಏಕದಿನ ಪಂದ್ಯ ಇಂದು

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂದು ಮೊದಲ ಏಕದಿನ ಪಂದ್ಯದಲ್ಲಿ ಭಾಗಿಯಾಗಲಿದ್ದು, ಮಧ್ಯಾಹ್ನ ಮೂರು ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.

ಶಿಖರ್​ ಧವನ್​, ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​, ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್​, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನವದೀಪ್​​ ಸೈನಿ, ಭುವನೇಶ್ವರ್ ಕುಮಾರ್​, ಕುಲ್ದೀಪ್​ ಯಾದವ್, ಯಜುವೇಂದ್ರ ಚಹಲ್​ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ದೇವದತ್​ ಪಡಿಕ್ಕಲ್​,ಋತುರಾಜ್ ಗಾಯಕ್ವಾಡ್​, ಇಶಾನ್​ ಕಿಶನ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಶ್ರೀಲಂಕಾ ತಂಡದಲ್ಲಿ ದಸುನ್​ ಶನಕಾ, ಧಜಂಜಯ ಡಿಸಿಲ್ವಾ, ಅವಿಷ್ಕಾ ಫರ್ನಾಂಡೋ,ಇಸುರ್ ಉಡಾನ, ಚಮಿರಾ ಕರುಣಾರತ್ನೆ, ಹಸರಂಗ,ಲಾಹೀರು ಉದಾರ, ರಮೇಶ್ ಮೆಂಡಿಸ್​,ಸಂದಕನ್​, ನಿಸಾಂಕಾ, ಅಸಲೆಂಕಾ, ಮಿನೋದ್​ ಭಾನುಕಾಗೆ ಮಣೆ ಹಾಕುವ ಸಾಧ್ಯತೆ ಇದೆ. ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ.

Share