ಆರ್ ಸಿಬಿ ಆಲ್ ರೌಂಡರ್ ಡೇನಿಯನ್ ಸ್ಯಾಮ್ಸ್ಗೆ ಕೊರೊನಾ ದೃಢ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ಗೆ ಕೋವಿಡ್ ಸೋಂಕು ತಗುಲಿದೆ. ‘ಡೇನಿಯಲ್ ಸ್ಯಾಮ್ಸ್ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಅವರು ಎಲ್ಲಾ ಕೊರೊನಾ ಪ್ರೋಟೋಕಾಲ್ಗಳನ್ನು ಅನುಸರಿಸುತ್ತಿದ್ದು, ಐಸೋಲೇಟ್ ಆಗಿದ್ದಾರೆ’ ಎಂದು ಆರ್ಸಿಬಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಡೇನಿಯಲ್ ಸ್ಯಾಮ್ಸ್ ತಂಡ ತಂಗಿದ್ದ ಚೆನ್ನೈನ ಹೋಟೆಲ್ಗೆ ಆಗಮಿಸಿದಾಗ ಮೊದಲ ಪರೀಕ್ಷೆಯ ವೇಳೆ ಕೋವಿಡ್ ನೆಗೆಟಿವ್ ಬಂದಿತ್ತು. ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.