ಶಿವಮೊಗ್ಗದಲ್ಲಿ ಖಾಸಗಿ ಬಸ್ ಮಾಲೀಕರು – ಟ್ರಾಫಿಕ್ ಪೊಲೀಸರ ನಡುವೆ ಜಟಾಪಟಿ

ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದೆದುರು ಖಾಸಗಿ ಬಸ್ ನಿಲ್ಲಿಸಲು ಮುಂದಾದ ವೇಳೆ ಪೊಲೀಸರು ಬಸ್ ಅನ್ನು ಹಿಂದಕ್ಕೆ ನಿಲ್ಲಿಸುವಂತೆ ಹೇಳುತ್ತಿದ್ದಂತಯೇ ಟ್ರಾಫಿಕ್​​ ಪೊಲೀಸರ ಮೇಲೆ ಈಸ್ಟ್ ವೆಸ್ಟ್ ಬಸ್​ ಮಾಲೀಕ ತಲ್ಕಿನ್ ಅಹಮದ್ ರೇಗಿ ಕೆಲಹೊತ್ತು ಜಟಾಪಟಿ ನಡೆಸಿದರು.

ನಾವು ಆರ್​ಟಿಒ ರವರು ಹೇಳಿದ ಮೇಲೆ ಬಸ್ ಬಿಟ್ಟಿದ್ದೇವೆ. ಆದರೆ ಪೊಲೀಸರು ನಮಗೆ ಏಕ ವಚನದಲ್ಲಿ ಬೈಯುತ್ತಾರೆ. ನಾವು ಜನ ಸೇವೆಗೆ ಬಂದಿರುವುದು. ನಮಗೆ ಈ ರೀತಿ ಬೈಯುವುದು ಏಕೆ ಎಂದು ಪೊಲೀಸರ ನಡೆಯನ್ನು ಖಂಡಿಸಿದರು. ಈ ವೇಳೆ ಟ್ರಾಫಿಕ್ ಪೊಲೀಸ್ ಹಾಗೂ ತಲ್ಕಿನ್ ಅಹಮದ್ ನಡುವೆ ಮಾತಿನ ಚಕಮಕಿ ಉಂಟಾಯಿತು.

ಬಳಿಕ ದೊಡ್ಡಪೇಟೆ ಸಿಪಿಐ ಹರೀಶ್ ಪಟೇಲ್ ಮಧ್ಯ ಪ್ರವೇಶಿಸಿ ವಾಗ್ವಾದಕ್ಕೆ ಬ್ರೇಕ್ ಹಾಕಿದರು. ಸ್ಥಳಕ್ಕೆ ಬಂದ ಆರ್​ಟಿಓ ಮಲ್ಲೇಶಪ್ಪ ಮಾತನಾಡಿ, ಖಾಸಗಿ ಬಸ್​ನವರಿಗೆ ಸ್ಥಳ ನಿಗದಿ ಮಾಡಿ ಅಲ್ಲೇ ನಿಲ್ಲಿಸಬೇಕೆಂದು ಸೂಚಿಸಿದ್ದೇವೆ ಎಂದು ತಿಳಿಸಿದರು. ಖಾಸಗಿ ಬಸ್​ನವರು ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಇದುವರೆಗೂ ಬಂದಿಲ್ಲ. ಖಾಸಗಿ ಬಸ್​ನವರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ದರಲ್ಲಿಯೇ ಬಸ್ ಓಡಿಸಬೇಕೆಂದು ಸೂಚನೆ ನೀಡಿದ್ದೇವೆಂದು ತಿಳಿಸಿದರು.

 

Share

Leave a Reply

Your email address will not be published.