ಒಂದೇ ದಿನ ಎರಡು ಬಾರಿ ದಾಳಿ ಮಾಡಿದ ಚಿರತೆ:ದಾಳಿಗೆ 15 ಕುರಿ,ಮೇಕೆಗಳು ಬಲಿ

ದೊಡ್ಡಬಳ್ಳಾಪುರ : ಒಂದೇ ದಿನ ಮದ್ಯಾಹ್ನ ಹಾಗು ರಾತ್ರಿ ಗ್ರಾಮಕ್ಕೆ ನುಗ್ಗಿದ ಚಿರತೆ 15 ಮೇಕೆ, ಕುರಿಗಳನ್ನು ಬಲಿ ಪಡೆದ ಘಟನನೆ ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸೊಣ್ಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪದೆ ಪದೆ ಚಿರತೆ ದಾಳಿ ಮಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು ಭಯಭೀತರಾಗಿದ್ದಾರೆ.

ಪ್ರತೀ ದಿನ ಚಿರತೆಯ ಆತಂಕದಲ್ಲಿ ದಿನಕಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಏಪ್ರಿಲ್‌ 5ರಂದು ಗ್ರಾಮಕ್ಕೆ ನುಗ್ಗಿ ನಾಲ್ಕು ಕುರಿಗಳನ್ನು ಬಲಿ ಪಡೆದಿದ್ದ ಘಟನೆ ಮಾಸುವ ಮುನ್ನವೆ, ಭಾನುವಾರ ಒಂದೇ ದಿನ ಎರಡು ಬಾರಿ ಗ್ರಾಮಕ್ಕೆ ನುಗ್ಗಿ 5 ಮೇಕೆ,22 ಕುರಿಗಳನ್ನು ಬಲಿ ಪಡೆದಿವೆ.

ಭಾನುವಾರ ಮಧ್ಯಾಹ್ನ ಗ್ರಾಮಕ್ಕೆ ನುಗ್ಗಿರುವ ಚಿರತೆ, ಗ್ರಾಮ ನಡುವಿರುವ ಮಂಜುನಾಥರೆಡ್ಡಿ ಎನ್ನುವವರು ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಯಲ್ಲಿದ್ದ 5 ಮೇಕೆಯನ್ನು ಬಲಿ ಪಡೆದು, 3 ಮೇಕೆಗಳನ್ನು ಗಾಯಗೊಳಿಸಿತ್ತು. ಈ ಕುರಿತು ವಿಷಯ ತಿಳಿದ ಅರಣ್ಯ ಅಧಿಕಾರಿ ಚೇತನ್ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆ ಹಿಡಿಯಲು ಬೋನ್ ಅಳವಡಿಸಿ ಸಿದ್ದತೆ ನಡೆಸಲಾಗಿದೆ ಹಾಗೂ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿ ತೆರಳಿದ್ದರು.

ಅದೆ ದಿನ ರಾತ್ರಿ ಈ ಗ್ರಾಮಕ್ಕೆ ನುಗ್ಗಿರುವ ಚಿರತೆ, ಮಲ್ಲಪ್ಪ ಎನ್ನುವವರ ಕುರಿ ದೊಡ್ಡಿಯಲ್ಲಿದ್ದ11 ಕುರಿಗಳ ಕಚ್ಚಿ ಕೊಂದಿದೆ, ಅಲ್ಲದೆ 12 ಕುರಿಗಳನ್ನು ಗಾಯಗೊಳಿಸಿದೆ. ಪದೇ ಪದೇ ಗ್ರಾಮಕ್ಕೆ ಚಿರತೆ ನುಗ್ಗುತ್ತಿರುವ ಆತಂಕ ಒಂದೆಡೆಯಾದರೆ, ಕುರಿ, ಮೇಕೆ ಸಾಕಿ ಜೀವನ‌ ನಡೆಸುತ್ತಿರುವ ಬಡ ರೈತರನ್ನು ನಷ್ಟಕ್ಕೆ ಕಾರಣವಾಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಜುನಾಥ್ ಟಿಎನ್:AIN,ದೊಡ್ಡಬಳ್ಳಾಪುರ

Share