ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ :ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಏಪ್ರಿಲ್ 10 ರಿಂದ 20ರವರೆಗೆ ಹೆಚ್ಚಿನ ರಜೆಗಳು ಇರುವ ಕಾರಣದಿಂದ ಪ್ರವಾಸಿ ತಾಣಗಳನ್ನು ಮುಚ್ಚುವುದಿಲ್ಲ. ಆದರೆ, ಮೈಸೂರಿಗೆ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ತಮ್ಮ ಕಚೇರಿಯಲ್ಲಿ ಮಾಧ್ಯಮದಗೋಷ್ಟಿ ನಡೆಸಿ ಮಾತನಾಡಿದ ಅವರು, ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಜಿಲ್ಲೆಗೆ ಬರುವವರು ಕೊರೊನಾ ನೆಗೆಟಿವ್ ವರದಿ ತರಬೇಕು. ಇದರ ತಪಾಸಣೆಗಾಗಿ 300 ಹೋಂ ಗಾರ್ಡ್​ಗಳನ್ನು ನಿಯೋಜಿಸುತ್ತೇವೆ. ಸರ್ಕಾರದ ಗೈಡ್​ಲೈನ್ಸ್​ ಪ್ರಕಾರ ಪ್ರವಾಸಿ ತಾಣಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಪಾರ್ಟಿಗಳು ಹಾಗೂ ಮದುವೆ ಸಮಾರಂಭಗಳನ್ನು ಮಾಡಬೇಕಾದರೆ ಕಡ್ಡಾಯವಾಗಿ ನಗರ ಪೊಲೀಸ್ ಕಮೀಷನರ್ ಕಚೇರಿಯಿಂದ ಅನುಮತಿ ಪಡೆಯಬೇಕು. ಈ ನಿರ್ಬಂಧ 10 ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆ ನಂತರ ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

Share

Leave a Reply

Your email address will not be published. Required fields are marked *