ಮಾಧ್ಯಮಗೋಷ್ಠಿ ನಡೆಸಿದ್ದು ಸಿಎಂ ವಿರುದ್ಧ ಬೇಸರಕ್ಕೆ ಅಲ್ಲ :ಸಚಿವ ಈಶ್ವರಪ್ಪ

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸವೇ ಆಗಿಲ್ಲ ಎಂದು ಆರೋಪ ಮಾಡಿದ್ದಾರೆ. ಅದಕ್ಕಾಗಿಯೇ ಎರಡು ವರ್ಷದ ಸಾಧನೆಯ ಪಟ್ಟಿ ಬಿಡುಗಡೆ ಮಾಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,

ಇಂತಹ ಪ್ರತಿಪಕ್ಷದ ನಾಯಕರು ಇರುವುದು ದುರಂತ. ಅವರ ಪಕ್ಷದಲ್ಲಿಯೇ ಅವರಿಗೆ ಮರ್ಯಾದೆ ಇಲ್ಲ. ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಕಟ್ಟು ಕಥೆ ಕಟ್ಟುತ್ತಿದ್ದಾರೆ. ಅವರಿಗೆ ಜ್ಞಾನಪೀಠ, ನೊಬೆಲ್ ಪ್ರಶಸ್ತಿ ನೀಡಬೇಕು. ಯತ್ನಾಳ್ ಪಕ್ಷದ ಶಿಸ್ತು ಮೀರಬಾರದು. ಪ್ರತಿದಿನ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಬೈತಾರೆ. ನಾನು ರಾಜ್ಯಪಾಲರಿಗೆ ದೂರು ಕೊಟ್ಟಿಲ್ಲ. ಬ್ಯುಸಿನೆಸ್​ ಟ್ರಾನ್ಸಾಕ್ಷನ್ ಕಾಯ್ದೆ ಬಗ್ಗೆ ಮಾಹಿತಿ ಪಡೆಯಲು ಹೋಗಿದ್ದೆ. ಸಿಎಂ ವಿರುದ್ಧ ದೂರು ನೀಡಿಲ್ಲ. ಅವರು ನಮ್ಮ ನಾಯಕರು. ಅವರನ್ನು ಬದಲಾಯಿಸುವ ಪ್ರಶ್ನೆಯಿಲ್ಲ ಎಂದರು.

ಇವಾಗ್ಲೂ ಯತ್ನಾಳ್ ಪಕ್ಷದ ವೇದಿಕೆ ಒಳಗೆ ಇರಬೇಕು. ಅವರು ಏನೇ ಬೈದ್ರು, ಅದಕ್ಕೆ ಸೂಕ್ತವಾದ ದಾಖಲೆ ಕೊಟ್ಟು ಮಾತಾಡಬೇಕು. ಅದು ಬಿಟ್ಟು ಸುಮ್ಮನೆ ಏನೇನೋ ಮಾತಾಡೋದು ಸರಿಯಲ್ಲ. ಯಡಿಯೂರಪ್ಪ ಬದಲಾವಣೆ ಆಗೋಲ್ಲ ಎಂಬ ವಿಶ್ವಾಸ ಇದೆ. ಇವಾಗ್ಲೂ ನಮಗೆ ಅವ್ರೇ ನಾಯಕರು. ಇಲಾಖೆಯಲ್ಲಿ ನೇರವಾಗಿ ಸಿಎಂ ಹ್ಯಾಂಡಲ್ ಮಾಡೋಕೆ ಬರಲ್ಲ. ಆದರೆ ಹಣ ಬಿಡುಗಡೆ ಮಾಡಬಹುದು ಎಂದರು.

ರಾಜ್ಯಪಾಲರು ಗುಜರಾತ್​ನಲ್ಲಿ ಆರ್ಥಿಕ ಸಚಿವರಾಗಿದ್ದವರು. ಹೀಗಾಗಿ, ಇದರ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಗವರ್ನರ್ ಬಳಿ ಹೋಗಿದ್ದೆ. ಯಾವುದೇ ಕಾರಣಕ್ಕೂ ಅವರ ವಿರುದ್ಧ ನಾನು ದೂರು ಕೊಟ್ಟಿಲ್ಲ. ಮುಂದೆಯೂ ಸಿಎಂ ಬಿಎಸ್​ವೈ ವಿರುದ್ಧ ದೂರು ಕೊಡಲ್ಲ. ರಾಜ್ಯಪಾಲರ ಬಳಿ ದೂರು ಕೊಟ್ಟಿಲ್ಲ. ಸಿ.ಟಿ.ರವಿ ಪಕ್ಷದ ನಾಯಕರು.

ಅವರ ಗಮನಕ್ಕೆ ತರದೇ ಏನು ದೇವೇಗೌಡರಿಗೆ, ಡಿ.ಕೆ.ಶಿವಕುಮಾರ್​​ಗೆ ಕೊಡೋಕೆ ಆಗುತ್ತಾ? ಅಮಿತ್ ಶಾ, ಸಿ.ಟಿ.ರವಿ, ಅರುಣ್ ಸಿಂಗ್ ಎಲ್ಲರೂ ನಮ್ಮ ಪಕ್ಷದ ಕುಟುಂಬ. ಕುಟುಂಬ ಅಂದಾಗ ಇಲಾಖೆಯಲ್ಲಿ ಆದ ವಿಷಯದ ಬಗ್ಗೆ ಗಮನಕ್ಕೆ ತಂದಿದ್ದೇನೆ. ಇದು ಬಿಟ್ಟು ನಾನು ಯಾರಿಗೂ ದೂರು ಕೊಟ್ಟಿಲ್ಲ. ನನ್ನ ಜೀವನದಲ್ಲಿ ನಾನು ಸ್ಫೋಟ ಆಗಲ್ಲ. ಸತ್ಯ ಕಂಡಾಗ ಮುನ್ನುಗ್ಗುತ್ತೇನೆ. ಕುತ್ತಿಗೆ ಕೂಯ್ದರು ಕೂಡ ನಾನು ದಾರಿ ತಪ್ಪೋದಿಲ್ಲ ಎಂದು ವಿವರಿಸಿದರು.

 

Share

Leave a Reply

Your email address will not be published.