ಕೊರೋನಾ ನಿಯಮಗಳನ್ನ ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವ ಎಂಟಿಬಿ ನಾಗರಾಜ್

ಹೊಸಕೋಟೆ: ಪೌರಡಳಿತ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ರಿಂದ ಅದ್ದೂರಿ ಹುಟ್ಟು ಹಬ್ಬ‌ ಆಚರಣೆ ಮಾಡಿಕೊಂಡರು. ಕರೊನಾ ನಿಯಮಗಳನ್ನ ಗಾಳಿಗೆ ತೂರಿ ನಗರದ ಕನಕಭವನದಲ್ಲಿ ಸಾವಿರಾರು ಜನರೊಂದಿಗೆ ಸಚಿವ ಕೆಕ್ ಕಟ್ಟಿಂಗ್ ಮಾಡಿ ಅದ್ದೂರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡರು.ಅಭಿಮಾನಿಗಳು ಮತ್ತು ಕಾರ್ಯಕರ್ತರು ಕೆಲವರು ಮಾಸ್ಕ್ ಧರಿಸಿರಲಿಲ್ಲ ಹಾಗೂ ಇನ್ನೂ ಕೆಲವರು ಬೆಕಾಬಿಟ್ಟಿಯಾಗಿ ಮಾಸ್ಕ್ ಹಾಕಿಕೊಂಡಿದ್ದರು.

ಸಾಮಾಜೀಕ ಅಂತರ ಮಾಸ್ಕ್ ಮರೆತು ಅಭಿಮಾನಿಗಳು ಎಂಟಿಬಿಗೆ ಹಾರತುರಾಯಿ ಹಾಕಿದರು.ನಂತರ ಹೊಸಕೋಟೆ ಟೌನಿನ ಕೆಇಬಿ ಸರ್ಕಲ್ ನಲ್ಲಿ ಜನರಿಗೆ ಭರ್ಜರಿ ಬಿರಿಯಾನಿ ಹಂಚಿದರು.ಬಿರಿಯಾನಿ ಜನ ಪಡೆಯಲು ಮುಗಿಬಿದ್ದರು ಇದರಿಂದ ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು ಪರದಾಡಿದರು. ಅದ್ದೂರಿ ಹುಟ್ಟು ಹಬ್ಬ ಆಚರಣೆ ಕೊರೊನಾ ಸಂಧರ್ಭದಲ್ಲಿ ಬೇಕಿತ್ತ ಅಂತಾ ಜನರು ಬೆಸರ ವ್ಯಕ್ತಪಡಿಸಿದರು.ಹುಟ್ಟು ಹಬ್ಬದ ಆಚರಣೆ, ಜನ ಸಮಾನ್ಯರಿಗೆ ಒಂದು ನ್ಯಾಯ, ಸಚಿವರಿಗೆ ಒಂದು ನ್ಯಾಯ, ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ರವರು, ಕರೊನಾ ಕಾರಣದಿಂದ ಅದ್ಧೂರಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಹೇಳಿದ್ದೆ ಆದರೂ ಕೆಲವರು ಆಚರಣೆ ಮಾಡಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರು. ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್,

ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ, ಯಡಿಯೂರಪ್ಪ ನವರೇ ನಮ್ಮ‌ಮುಖ್ಯಮಂತ್ರಿಗಳು, ಒಂದುವೇಳೆ ಕುರ್ಚಿ ಖಾಲಿ ಆದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು. ಸಿಎಂ ಬದಲಾವಣೆ ಆದರೂ ನಮ್ಮ ಸಚಿವ ಸ್ಥಾನಕ್ಕೆ ಯಾವುದೇ ತೊಂದರೆ ಆಗಲ್ಲ. ಬಿಜೆಪಿಯಲ್ಲಿ ನಾವು 11 ಜನ ಸಚಿವರಾಗಿದ್ದೇವೆ ,

ಯಾರೇ  ಸಿಎಂ ಆದರೂ ಇನ್ನೂ ಎರಡು ವರ್ಷ ನಾವೇ ಸಚಿವರಾಗಿ ಮುಂದುವರೆಸುತ್ತೇವೆ ಎಂದು ಹೇಳಿದರು. ಯಡಿಯೂರಪ್ಪ ಅವರೇ ಸಿಎಂ ಆಗಿದ್ದಾರೆ ಕುರ್ಚಿ ಇನ್ನೂ ಖಾಲಿಯಾಗಲಿಲ್ಲ.ಕುರ್ಚಿ ಖಾಲಿ ಆದ ಮೇಲೆ ಹೈಕಮಾಂಡ್ ಇದ್ದಾರೆ ಯಾರನ್ನ ಮುಂದುವರೆಸುತ್ತಾರೋ ಗೊತ್ತಿಲ್ಲ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

Share

Leave a Reply

Your email address will not be published. Required fields are marked *