ಈಗಿನ ಮಠಾಧೀಶರು ನಡೆದಾಡುವ ದೇವರು ಶಿವಕುಮಾರ್ ಶ್ರೀಗಳನ್ನ ನೋಡಿ ಕಲಿಯಿರಿ: ಹೆಚ್.ವಿಶ್ವನಾಥ್

ಮೈಸೂರು: ಹೈಕಮಾಂಡ್‌ಗಿಂತ ದೊಡ್ಡವರು ಯಾರು ಇಲ್ಲ. ಯಡಿಯೂರಪ್ಪನವರು ಬಂದು ಬಿಜೆಪಿ ಕಟ್ಟಿಲ್ಲ. ಬಿಜೆಪಿ ಪಕ್ಷ ಕಟ್ಟಿದ್ದು ಏ.ಕೆ.ಸುಬ್ಬಯ್ಯ, ಶಂಕರಮೂರ್ತಿ ಎಂದು ಬಿಜೆಪಿ ಎಂಎಲ್​ಸಿ ಹೆಚ್​.ವಿಶ್ವನಾಥ್​ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು, ಯಡಿಯೂರಪ್ಪ ನೀವೊಬ್ಬರೇ ಪಕ್ಷ ಕಟ್ಟಿಲ್ಲ, ಎಲ್ಲರೂ ಸೇರಿ ಕಟ್ಟಿದ್ದು ಪಕ್ಷ. ಪಕ್ಷವನ್ನ ಅಧಿಕಾರಕ್ಕೆ ತಂದಿದ್ದು, ಅವರ ಹಿತದೃಷ್ಟಿಯಿಂದ, ‌ಜನರ ಹಿತದೃಷ್ಟಿಯಿಂದ ಗೌರವಯುತ ನಿರ್ಗಮನಕ್ಕೆ ಸೂಚಿಸಿದೆ ಎಂದರು. ಯಡಿಯೂರಪ್ಪನವರಿಗೆ ಎರಡು ಬಾರಿ ಸರಿಯಾದ ನಿರ್ಗಮನ ಆಗಲಿಲ್ಲ.

ಈ ಬಾರಿಯು ಹಾಗೇ ಮಾಡಿಕೊಳ್ಳಬೇಡಿ. ಗೌರವಯುತವಾಗಿ ನೀವೂ ಸಿಎಂ ಸ್ಥಾನದಿಂದ ನಿರ್ಗಮಿಸಿ. ಇದಕ್ಕೆ ಮಠಾಧೀಶರು ಕೂಡ ಇದಕ್ಕೆ‌ ಅಡ್ಡಗಾಲು ಹಾಕಬಾರದು. ಈಗಿನ ಮಠಾಧೀಶರು ನಡೆದಾಡುವ ದೇವರು ಶಿವಕುಮಾರ್ ಶ್ರೀಗಳನ್ನ ನೋಡಿ. ಅವರು ಯಾವುದೇ ರಾಜಕೀಯಕ್ಕೆ ಅವರು ಆಸ್ಪದವೇ ನೀಡಲಿಲ್ಲ. ಅಂತವರನ್ನ ನೋಡಿ ಜನತಂತ್ರ ವ್ಯವಸ್ಥೆಯಲ್ಲಿ ಕೆಲ ಮಠಾಧೀಶರು ಕಲಿಯಬೇಕಿದೆ ಎಂದರು

 

Share

Leave a Reply

Your email address will not be published. Required fields are marked *