ಬೆಳಗಾವಿಯಲ್ಲಿ ಡಿಕೆಶಿ ಸಂಚಾರ :ಬಿಜೆಪಿ-ಜೆಡಿಎಸ್ ಪಾಳಯದಲ್ಲಿ ತಳಮಳ

ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಲು ಹಾಗೂ ಲೋಕಸಭೆ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಳೆದಿರುವ ನಿಲುವು, ಕೈಗೊಳ್ಳುತ್ತಿರುವ ತೀರ್ಮಾನವು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಒಂದು ಕಡೆ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸುತ್ತಾ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿರುವ ಶಿವಕುಮಾರ್,

ಇದರ ಜತೆ-ಜತೆಗೆ ಅನ್ಯ ಪಕ್ಷದ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಹಾಗೂ ಹಲವು ತಟಸ್ಥ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಬೆಂಬಲಿಸುವಂತೆ ಮನವೊಲಿಸುವ ಮೂಲಕ ಉಳಿದ ಪಕ್ಷಗಳಿಗೆ ಆತಂಕ ಮೂಡಿಸುತ್ತಿದ್ದಾರೆ. ಕಳೆದ ಎರಡು ದಿನದಿಂದ ಬೆಳಗಾವಿಯಲ್ಲಿ ಬೀಡುಬಿಟ್ಟಿರುವ ಡಿಕೆಶಿ, ಹಲವು ನಾಯಕರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಜೊತೆಗೆ ತಟಸ್ಥವಾಗಿರುವ ಕೆಲ ರಾಜಕೀಯ ನಾಯಕರನ್ನು ಮತ್ತೆ ರಾಜಕೀಯ ಅಖಾಡಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಅವರ ಪ್ರಯತ್ನ ಮೊದಲ ಗೆಲುವಿನದ್ದಾಗಿದೆ. ಅದರ ಜೊತೆ ಹಠಕ್ಕೆ ಬಿದ್ದು ಸತೀಶ್ ಜಾರಕಿಹೊಳಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗೆದ್ದು ಬೆಳಗಾವಿಯಲ್ಲಿ ತಮ್ಮ ಪ್ರಾಬಲ್ಯ ಪ್ರದರ್ಶಿಸುವ ಗುರಿ ಹೊಂದಿದ್ದಾರೆ. ಬೆಳಗಾವಿಗೆ ಬಂದು ಗೆಲ್ಲಲಿ ಎಂದು ರಮೇಶ್ ಜಾರಕಿಹೊಳಿ ಹಾಕಿರುವ ಸವಾಲಿಗೆ ಉತ್ತರ ನೀಡುವ ಯತ್ನವನ್ನು ಡಿಕೆಶಿ ಮಾಡಿದ್ದಾರೆ.

 

Share

Leave a Reply

Your email address will not be published.