ತುಮಕೂರು ತಾಲ್ಲೂಕಿನಲ್ಲಿ ಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ……

ತುಮಕೂರು: ಇಂದು ಬುಧವಾರ ತುಮಕೂರು ತಾಲೂಕಿನಾದ್ಯಂತ 116 ಜನರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದ್ದು ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಜನರು ಮುಂಜಾಗ್ರತೆಯಿಂದ ಇರಬೇಕಾಗಿದೆ ಈ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 26793 ಪ್ರಕರಣಕ್ಕೆ ಏರಿಕೆಯಾಗಿದ್ದು, ಇಂದು 130 ಮಂದಿ ಗುಣಮುಖರಾಗಿದ್ದಾರೆ ಹಾಗೂ 1343 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಅಲ್ಲದೆ ಬುಧವಾರ ಇಬ್ಬರು ಸಾವನ್ನಪ್ಪಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ: ಮೊಹಮ್ಮದ್ ಆಸಿಫ್, AIN

Share

Leave a Reply

Your email address will not be published. Required fields are marked *