ಶುಲ್ಕ ಕಟ್ಟದ ವಿದ್ಯಾರ್ಥಿಗೆ ಥಳಿಸಿದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ!

ಪಾವಗಡ: ಪೀಸ್ ಕಟ್ಟಿಲ್ಲ ಎಂದು ವಿ.ಎಸ್.ಸಂಸ್ಥೆಯ ಕಾರ್ಯದರ್ಶಿ ವಿದ್ಯಾರ್ಥಿಗೆ ಮೈ ಮೇಲೆ ಬರೆ ಬಂದಹಾಗೆ ಹೊಡೆದ ಘಟನೆ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ವಿ ಎಸ್ ಕಾನ್ವೆಂಟ್ ನಲ್ಲಿ‌ನಡೆದಿದೆ.
ವಿದ್ಯಾರ್ಥಿಯ ತಂದೆ ಇತ್ತೀಚಗೆಷ್ಟೇ ಕೋವಿಡ್ ನಿಂದ ಮೃತಪಟ್ಟಿದ್ದರು. ತಂದೆ ಸಾವಿನಿಂದ ಕಷ್ಟದ ಪರಿಸ್ಥಿತಿಯಲ್ಲಿ ದ್ದ ಪೊಷಕನ ಕುಟುಂಬವು ಟುಷನ್ ಪೀಸ್ ಐದುಸಾವಿರ ಕಟ್ಟಿಲ್ಲ. ಇದರಿಂದ ಕುಪಿತಗೊಂಡ ವಿ.ಎಸ್.ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ಅಶ್ವಥ್ ನಾರಾಯಣ ಹಾಗೂ ಹಿಂದಿ ಶಿಕ್ಷಕ ರಾಮಕೃಷ್ಣ ನಾಯ್ಕ್ ಎಂಬುವರು ವಿದ್ಯಾರ್ಥಿಗೆ ಮೈ ಮೇಲೆ ಬರೆ ಬಂದಹಾಗೆ ಹೊಡೆದಿದ್ದಾರೆ.

ವಿ.ಎಸ್.ಸಂಸ್ಥೆ ಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಹಮ್ಮದ್ದುಲ್ಲಾ ಎಂಬುವ ವಿದ್ಯಾರ್ಥಿ ತಂದೆ ಆಕಸ್ಮಿಕವಾಗಿ ಕೋವಿಡ್ 19 ರೋಗಕ್ಕೆ ತಂದೆ ಮೃತಪಟ್ಟಿರುತ್ತಾರೆ.
ಇದರಿಂದ ಕುಟುಂಬದ ನಿರ್ವಹಣೆ ಕಷ್ಟಕರವಾದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವ ಕಾರಣದಿಂದ ಶಾಲೆಯ ಪೀಸ್ ಕಟ್ಟಲು ಹಣವಿಲ್ಲ ಎಂಬುದಾಗಿ ಹಲವು ಬಾರಿ ಶಿಕ್ಷಕರಿಗೆ ಹಾಗೂ ಸಂಸ್ಥೆಯ ಕಾರ್ಯದರ್ಶಿ ಗಮನಕ್ಕೆ ತಂದರು ಈ ಹಿಂದೆ ಹಲವು ಬಾರಿ ಹೊಡೆದ ನಿದರ್ಶನಗಳು ಸಹ ಇವೆ.ಅದರೆ ಮಾನವೀಯತೆಯ ಇಲ್ಲದ ಮನುಷ್ಯರಿಗೆ ಹಣ ಮುಖ್ಯ ಹೊರೆತು. ಮನುಷ್ಯನ ಸಮಸ್ಯೆ ಮುಖ್ಯವಲ್ಲ. ಎಂಬುದು ಉದಾಹರಣೆಗೆ ವಿ.ಎಸ್ ಸಂಸ್ಥೆ ಎಂಬುದಾಗಿ ಹೇಳಬಹುದಾಗಿದೆ.

ಪೀಸ್ ಕೇಳಿದರೆ ಯಾರ್ ಯಾರ್ ಬಳಿ ಪೋನ್ ಮಾಡಿಸುತ್ತಿಯ ಎಂದು ಹೇಳಿ ಮಂಗಳವಾರ ಶಾಲೆಯ ಕಾರ್ಯದರ್ಶಿ ಹಾಗೂ ಹಿಂದಿ ಶಿಕ್ಷಕ ವಿದ್ಯಾರ್ಥಿಗೆ ಮೈ ಮೇಲೆ ಬರೆ ಬಂದಹಾಗೆ ಹೋಡೆದಿದ್ದರೆ.

ಈ ವಿದ್ಯಾರ್ಥಿಗೆ ಎಲ್ಲಾ ವಿದ್ಯಾರ್ಥಿಗಳ ಮುಂದೆ ಪೀಸ್ ಗಾಗಿ ಮನಸ್ಸಿಗೆ ಇಚ್ಚೆ ಬಂದಹಾಗೆ ಹೊಡೆದ ಕಾರಣ ವಿದ್ಯಾರ್ಥಿ ಮನೆಗೆ ಬಂದು ಕೊಠಡಿಯೊಂದರಲ್ಲಿ ಚಿಲಕ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದಾನೆ ತಕ್ಷಣವೇ ವಿದ್ಯಾರ್ಥಿಯ ಅಣ್ಣ ಗಮನಿಸಿ ಬಾಗಿಲು ಹೊಡೆದು ರಕ್ಷಿಸದಿದ್ದರೆ.

ತಾಲೂಕಿನ ಇಂತಹ ಪ್ರಕರಣ ಗಳು ಮತ್ತೆ ಮರುಕಳಿಸಬಹುದು ಎಂಬುದಾಗಿ ಶಿಕ್ಷಣ ಇಲಾಖೆಯವರು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಶಿಕ್ಷಕನಿಗೆ ಹಾಗೂ ಕಾರ್ಯದರ್ಶಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬುದು ವಿದ್ಯಾರ್ಥಿ ಅಣ್ಣ ಹಾಗೂ ತಾಯಿ ಆರೋಪಿಸುತ್ತಿದ್ದೆವೆ.

ತದ ನಂತರ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರುಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪವನ್ ಕುಮಾರ್ ರವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಜಯಕರ್ನಾಟಕ ತಾಲ್ಲೂಕು ಅಧ್ಯಕ್ಷ ಗೋವರ್ಧನ ಮಾತನಾಡಿ ಕೋವಿಡ್ ರೋಗದಿಂದ ಮೃತಪಟ್ಟ ಪೋಷಕರ ಮಗ ಎಂಬುದಾಗಿ ತಿಳಿದಿದ್ದು ಸಹ ಮಕ್ಕಳ ಬಳಿ ಶಾಲಾ ಶುಲ್ಕ ವಸೂಲಿ ಮಾಡುತ್ತಿರುವುದು ನೋಡಿದರೆ ಇನ್ನು ಎಷ್ಟರಮಟ್ಟಿಗೆ ದಂದೆ ಮಾಡಿತ್ತಿದ್ದರೆ ಎಂಬುದು ಶಿಕ್ಷಣ ಇಲಾಖೆ ತಿಳಿಯಬೇಕು. ಈ ರೀತಿಯಲ್ಲಿ ದಂದೆಗಳು ಇನ್ನೂ ಮುಂದೆ ಖಾಸಗಿ ಶಾಲೆಗಳಲ್ಲಿ ಇಂತಹ ಸಮಸ್ಯೆ ಕಂಡು ಬಂದರೆ ಅಂತಹಾ ಸಂಸ್ಥೆ ಗಳನ್ನು ರದ್ದು ಗೊಳಿಸುವ ವರೆಗೂ ನಾವು ಬಿಡುವುದಿಲ್ಲ ಎಂದರು.ಈ ವೇಳೆ ವೈ.ಎಸ್.ಎಫ್ ಸಂಘದ ಅಧ್ಯಕ್ಷ ಗಗನ್ ರಾಜ್ ಮಾತನಾಡಿದರು.ಚಿನ್ನಮೈಯ್ಯಿ ಸಂಸ್ಥೆ ಯ ಸತ್ಯ ಲೋಕೇಶ್.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ಮೈಕಲ್ ನಾಡರ್ ಮಾತನಾಡಿದರು.ಪಾವಗಡ ತಾಲ್ಲೂಕು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಇಮ್ರಾನ್ ಉಲ್ಲಾ.
ಎಬಿವಿಪಿ.ಅಧ್ಯಕ್ಷರು.ಜಯಕರ್ನಾಟಕ ತಾಲ್ಲೂಕು ಪ್ರದಾನ ಕಾರ್ಯದರ್ಶಿ ಡಿ.ರಪೀಕ್.ಇತರೆ ಹಲವು ಮಂದಿ ಇದ್ದರು.

Share

Leave a Reply

Your email address will not be published. Required fields are marked *