ನೀರಿನ ಬಕೆಟ್ ಗೆ ಮಗುಚಿ ಬಿದ್ದು 6 ತಿಂಗಳ ಗಂಡು ಮಗು ಸಾವು

ಮಂಡ್ಯ :- 6 ತಿಂಗಳ ಮಗುವೊಂದು ಮನೆಯಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ ನೀರಿನ ಬಕೆಟ್ ಗೆ ಮಗುಚಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯ ಮರಕಾಡದೊಡ್ಡಿಯ ಕಿರಣ್ ಹಾಗೂ ಸುವರ್ಣ ದಂಪತಿಗೆ ಸೇರಿದ ಗಂಡು ಮಗು ಎಂದು ತಿಳಿದು ಬಂದಿದೆ.

ಮನೆಯಲ್ಲಿ ಆಡವಾಡುತ್ತಿದ್ದ ವೇಳೆ ನೀರು ತುಂಬಿದ ಬಕೆಟ್ ಗೆ ಬಿದ್ದು ಸಾವಿಗೀಡಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಗಿರೀಶ್ ರಾಜ್ ಮಂಡ್ಯ.

Share

Leave a Reply

Your email address will not be published. Required fields are marked *