ನಂದಿಬೆಟ್ಟದಲ್ಲಿ  ರೋಪ್ ವೇ ನಿರ್ಮಾಣಕ್ಕೆ  ರೈತರ ವಿರೋಧ

ದೊಡ್ಡಬಳ್ಳಾಪುರ: ವಿಶ್ವ ವಿಖ್ಯಾತ  ನಂದಿಬೆಟ್ಟಕ್ಕೆ  ರೋಪ್ ವೇ ನಿರ್ಮಿಸಲು ಸರ್ಕಾರ ಮುಂದಾಗಿದ್ದು,ರೋಪ್ ವೇ ಜೊತೆಗೆ ವಾಹನಗಳ  ಪಾರ್ಕಿಂಗ್ ಗಾಗಿ  ರೈತರ ಜಮೀನು  ಸ್ವಾಧೀನವನ್ನ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಯೋಜನೆಗೆ  ದೊಡ್ಡಬಳ್ಳಾಪುರ  ರೈತರ ಜಮೀನು ಸ್ವಾಧೀನ ಮಾಡಿಕೊಂಡಿರುವುದು ರೈತರ ಅಕ್ರೋಶಕ್ಕೆ  ಕಾರಣವಾಗಿದೆ.  ಪ್ರಾಣ ಕೊಟ್ಟರು  ಸರಿ ಪಾರ್ಕಿಂಗ್  ಜಾಗಕ್ಕೆ  ತಮ್ಮ  ಜಮೀನು ನೀಡುವುದಿಲ್ಲವೆಂದು ಅಧಿಕಾರಿಗಳ ವಿರುದ್ಧ  ತಮ್ಮ  ಅಕ್ರೋಶ  ವ್ಯಕ್ತಪಡಿಸಿದ್ದಾರೆ.
ನಂದಿಬೆಟ್ಟಕ್ಕೆ  ರೋಪ್ ವೇ ಕಲ್ಪಿಸಬೇಕೆಂಬುದು ಬಹು ದಿನಗಳ ಕನಸು, ಈ ಕನಸಿಗೆ  ಪ್ರವಾಸೋದ್ಯಮ  ಸಚಿವ ಯೊಗೇಶ್ವರ್ ಜೀವ ನೀಡಿದ್ದಾರೆ. ಶೀಘ್ರದಲ್ಲಿ  ಟೆಂಡರ್  ಕರೆದು ಕಾಮಾಗಾರಿಗೆ ಚಾಲನೆ ನೀಡಬೇಕೆಂದು ಆದೇಶಿಸಿದ್ದಾರೆ, ಜೊತೆಗೆ ಜುಲೈ  23 ರಂದು ನಂದಿಗಿರಿಧಾಮಕ್ಕೆ ಭೇಟಿ ನೀಡುವ ಸಚಿವ ಯೊಗೇಶ್ವರ್ ರೋಪ್ ವೇ ನಿರ್ಮಾಣವಾಗುವ ಸ್ಥಳವನ್ನ  ವಿಕ್ಷಣೆ ಮಾಡಲಿದ್ದಾರೆ.

“ಪ್ರವಾಸಿಗರ ವಾಹನಗಳ ನಿಲುಗಡೆ ಜಾಗಕ್ಕೆ ದೊಡ್ಡಬಳ್ಳಾಪುರ ರೈತರ ಜಮೀನು ಸ್ವಾಧೀನ.”

ರೋಪ್ ವೇ ನಿರ್ಮಾಣವಾಗುವ ಸ್ಥಳದಲ್ಲೇ  ಪ್ರವಾಸಿಗರ  ವಾಹನಗ  ನಿಲುಗಡೆಗೆ ಪಾರ್ಕಿಂಗ್  ನಿರ್ಮಾಣ  ಸಹ ಮಾಡಲಾಗುತ್ತಿದೆ. ಪಾರ್ಕಿಂಗ್  ನಿರ್ಮಾಣಕ್ಕೆ ಒಟ್ಟು 11  ಎಕರೆ ರೈತರ ಜಮೀನು ಸ್ವಾಧೀನ ಮಾಡಲಾಗಿದೆ, ಪ್ರಾದೇಶಿಕ  ಆಯುಕ್ತರು, ಬೆಂಗಳೂರು  ವಿಭಾಗದ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ  ಕರ್ನಾಟಕ  ಭೂಕಂದಾಯ  ಅಧಿನಿಯಮ 1964ರ ಕಲಂ  71ರ ಅನ್ವಯ ಪಾರ್ಕಿಂಗ್  ಕಾಮಾಗಾರಿಗೆ ಸ್ಥಳವನ್ನ  ಕಾಯ್ದಿರಿಸುವಂತೆ ಆದೇಶಿಸಲಾಗಿದೆ,
ಆದರೆ ಈ ಜಾಗ ಚಿಕ್ಕಬಳ್ಳಾಪುರ ಮತ್ತ  ದೊಡ್ಡಬಳ್ಳಾಪುರ  ಗಡಿಭಾಗದಲ್ಲಿ  ಬರಲಿದೆ, ಚಿಕ್ಕಬಳ್ಳಾಪುರ ಜಿಲ್ಲೆಯ  ಮಡುಕು ಹೊಸಹಳ್ಳಿಯ  ಸರ್ವೆ ನಂಬರ್ 28 ರಲ್ಲಿ 8 ಎಕರೆ ಜಾಗ ಮತ್ತು ದೊಡ್ಡಬಳ್ಳಾಪುರ  ತಾಲೂಕಿನ  ಹೆಗ್ಗಡಿಹಳ್ಳಿಯ  ಸರ್ವೆ ನಂಬರ್ 94 ರಲ್ಲಿ 3 ಎಕರೆ 20 ಗುಂಟೆ ಜಾಗವನ್ನ ಕಾಯ್ದಿರಿಸಿದೆ, ಚಿಕ್ಕಬಳ್ಳಾಪುರದ ಮಡುಕು ಹೊಸಹಳ್ಳಿಯ ಸರ್ವೆ ನಂಬರ್ 28ರಲ್ಲಿಯೇ ಸರ್ಕಾರಿ ಗೋಮಾಳ ಜಾಗ ಇರುವಾಗ  ದೊಡ್ಡಬಳ್ಳಾಪುರ ತಾಲೂಕಿನ  ಹೆಗ್ಗಡಿಹಳ್ಳಿಯ ರೈತರ  ಜಮೀನು ಯಾಕೆಂದು ರೈತರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ.

“25 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಜಮೀನು ಏಕಾಏಕಿ ಸ್ವಾಧೀನ.”

ನಂದಿಬೆಟ್ಟದ ತಪ್ಪಲಲ್ಲಿರುವ ದೊಡ್ಡಬಳ್ಳಾಪುರ  ತಾಲೂಕಿನ  ಹೆಗ್ಗಡಿಹಳ್ಳಿಯ  ಸರ್ವೆ ನಂಬರ್ 94 ರಲ್ಲಿ ರೈತರು ಕಳೆದ  25 ವರ್ಷಗಳಿಂದ  ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ, ಕಲ್ಲು ಬಂಡೆಗಳಿಂದ ಕೂಡಿದ ಜಾಗವನ್ನು  ಸಾಗುವಳಿ  ಭೂಮಿಯನ್ನಾಗಿ ಮಾಡಿ ರಾಗಿಯನ್ನ ಬೆಳೆಯುತ್ತಿದ್ದಾರೆ,ಸರ್ಕಾರ  ರೈತರಿಗೆ ಬಗರ್ ಹುಕುಂ ಸಾಗುವಳಿ ಚೀಟಿಯನ್ನ  ನೀಡಿರುತ್ತೆ, ತಮ್ಮ  ಹೆಸರಿಗೆ  ಖಾತೆ ಮಾಡಿಕೊಂಡುವಂತೆ ಅರ್ಜಿಯನ್ನ ಸಲ್ಲಿಸಿದ್ದು ಕಂದಾಯ ಅಧಿಕಾರಿಗಳು  ಸ್ಥಳ  ತನಿಖೆ ವರದಿ,  ಸ್ಕೆಚ್ ಸಹ ಮಾಡಿರುತ್ತಾರೆ, ಆದರೀಗ ಏಕಾಏಕಿ  ಸರ್ಕಾರ ಪಾರ್ಕಿಂಗ್  ಜಾಗಕ್ಕಾಗಿ ರೈತರ ಜಮೀನು   ಸ್ವಾಧೀನಕ್ಕೆ ಆದೇಶಿಸಿದೆ, ಜಮೀನು ಕಳೆದುಕೊಳ್ಳುವ ಭಯದಲ್ಲಿರುವ ರೈತರ ತಮ್ಮ  ಪ್ರಾಣ  ಕೊಟ್ಟರು ತಮ್ಮ  ಜಮೀನು ಪಾರ್ಕಿಂಗ್  ಜಾಗಕ್ಕೆ ನೀಡುವುದಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಕೆ  ನೀಡಿದ್ದಾರೆ, ನಾಳೆ ಸ್ಥಳಕ್ಕೆ  ಭೇಟಿ  ನೀಡುವ ಪ್ರವಾಸೋದ್ಯಮ  ಸಚಿವರಿಗೂ ಮನವಿ ಸಲ್ಲಿಸಿ  ತಮ್ಮ  ಜಮೀನು ತಮಗೆ  ನೀಡುವಂತೆ ಮನವಿ ಸಲ್ಲಿಸುತ್ತೆವೆ ಎಂದು ರೈತರು ಹೇಳಿದ್ದಾರೆ..

ಮಂಜುನಾಥ್ ಟಿಎನ್ ಆಲ್ ಇಂಡಿಯನ್ ನ್ಯೂಸ್ ದೊಡ್ಡಬಳ್ಳಾಪುರ

Share

Leave a Reply

Your email address will not be published. Required fields are marked *