ಒಡಹುಟ್ಟಿದ ತಂಗಿಯನ್ನೂ ಬಿಡದ ಕಾಮುಕ ಸಹೋದರರು :ಬಾಲ್ಯದಿಂದಲೂ ಲೈಂಗಿಕ ಕಿರುಕುಳ!

ತೆಲಂಗಾಣಕಾಮುಕ ಸಹೋದರರಿಬ್ಬರು ಒಡಹುಟ್ಟಿದ ಸಹೋದರಿ ಮೇಲೆ ಬಾಲ್ಯದಿಂದಲೂ ಲೈಂಗಿಕ ಕಿರುಕುಳ ನೀಡಿರುವ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸಂತ್ರಸ್ತೆ ತೆಲಂಗಾಣದ ಭದ್ರಾಡ್ರಿ ಕೊಟ್ಟಗುಡೆಮ್​ ಜಿಲ್ಲೆಯಲ್ಲಿ ವಾಸವಾಗಿದ್ದು, ಮಗುವಾಗಿದ್ದಾಗಲೇ ಈಕೆಯ ತಂದೆ ಸಾವನ್ನಪ್ಪಿದ್ದರಿಂದ ಕುಟುಂಬದ ಜವಾಬ್ದಾರಿ ತಾಯಿ ಮೇಲೆ ಬಿದ್ದಿತ್ತು. 9ನೇ ತರಗತಿಯಲ್ಲಿದ್ದಾಗ(2009) ಸ್ವಂತ ಅಣ್ಣ ಕಿರುಕುಳ ನೀಡಲು ಆರಂಭಿಸಿದ್ದಾನೆ.

ಈ ವೇಳೆ, ಕುಟುಂಬ ಮನುಗುರುನಲ್ಲಿ ವಾಸವಾಗಿತ್ತು.. ಇದಾದ ಬಳಿಕ ಕೊಟ್ಟಗುಡೆಮ್​​ಗೆ ಬಂದಿದ್ದಾರೆ. ಆಕೆ ದೊಡ್ಡವಳಾದರೂ ಅಣ್ಣ ಚಿತ್ರಹಿಂಸೆ ನೀಡುವುದನ್ನ ಮಾತ್ರ ನಿಲ್ಲಿಸಿಲ್ಲ. ಇದರ ಮಧ್ಯೆ ಅಜ್ಜಿಯ ಮನೆಗೆ ತೆರಳಿದ್ದ ವೇಳೆ ಚಿಕ್ಕಪ್ಪನ ಮಗ ಸಹ ಅದೇ ರೀತಿ ತನ್ನೊಂದಿಗೆ ನಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾಳೆ. ಇದರ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆಂದು ಆಕೆ ಹೇಳಿಕೊಂಡಿದ್ದಾಳೆ.

ಶಿಕ್ಷಣಕ್ಕಾಗಿ ಬೇರೆ ನಗರದಲ್ಲಿ ವಾಸವಾಗಿದ್ದೆ. ಆದರೆ, ಲಾಕ್​ಡೌನ್​ ಸಮಯದಲ್ಲಿ ಮನೆಗೆ ಮರಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಈ ವೇಳೆ ಕೂಡ ಅಣ್ಣ ನನ್ನ ಮೇಲೆ ದೌರ್ಜನ್ಯವೆಸಗಿದ್ದಾನೆಂದು ಆಕೆ ಆರೋಪಿಸಿದ್ದಾಳೆ. ಆತನ ಕಿರುಕುಳದಿಂದ ಬೇಸತ್ತ ಯುವತಿ ಇದೀಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲು ಮಾಡುತ್ತಿದ್ದಂತೆ ತಾಯಿ, ಚಿಕ್ಕಮ್ಮ, ಚಿಕ್ಕಪ್ಪ ಹಾಗೂ ಇಬ್ಬರು ಸಹೋದರರಿಂದ ಕೊಲೆ ಬೆದರಿಕೆ ಸಹ ಬಂದಿದ್ದು, ಭಯದಿಂದಾಗಿ ಸಹೋದರ ಅಜಯ್​ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

 

Share

Leave a Reply

Your email address will not be published.