ಪಂಜಾಬ್ ಗಡಿಯಲ್ಲಿ ಯೋಧರ ಕಾರ್ಯಾಚರಣೆ :ಪಾಕ್ ನ ಓರ್ವ ಸ್ಮಗ್ಮಲರ್ ಬೇಟೆ

ಪಂಜಾಬ್: ಇಂದು ಬೆಳಗ್ಗೆ ನಡೆದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಂಜಾಬ್ ಪೊಲೀಸರ ಕಾರ್ಯಾಚರಣೆಯಲ್ಲಿ ಓರ್ವ ಪಾಕಿಸ್ತಾನಿ ಸ್ಮಗ್ಲರ್​ನನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ 22 ಪ್ಯಾಕೆಟ್ ಹೆರಾಯಿನ್, 2 ಎಕೆಎಂ ರೈಫಲ್ ಮತ್ತು 4 ಮ್ಯಾಗಜೀನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾರ್ಡರ್​ ಔಟ್​ ಪೋಸ್ಟ್​ (ಬಿಒಪಿ) ಕಕ್ಕರ್ ಫಾರ್ವರ್ಡ್ ಪ್ರದೇಶದ ಬಳಿ ಕಾರ್ಯಾಚರಣೆ ನಡೆದಿದೆ.

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, “ಇದು ಲೋಪೋಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರ ಹತನಾಗಿದ್ದು, ಎಫ್‌ಐಆರ್‌ನಲ್ಲಿ ಭಾರತೀಯ ಪ್ರಜೆಯೂ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಹೆಸರಿಸಲಾಗಿದೆ” ಎಂದು ತಿಳಿಸಿದ್ದಾರೆ.

 

Share

Leave a Reply

Your email address will not be published. Required fields are marked *