ಮದುವೆಯಾದ 10 ತಿಂಗಳಲ್ಲೇ ನವವಿವಾಹಿತೆ ಶವವಾಗಿ ಪತ್ತೆ :ಪತಿ-ಅತ್ತೆಯ ಮೇಲೆ ಗುಮಾನಿ

ಹಾವೇರಿ: ಗೃಹಿಣಿವೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಶ್ವೇತಾ ಚಿಕ್ಕೇರಿ (23) ಎಂದು ಗುರುತಿಸಲಾಗಿದೆ. ಶ್ವೇತಾಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಕೆಯ ಪತಿ ಮತ್ತು ಅತ್ತೆ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿ ಶ್ವೇತಾಳ ತಂದೆ ಉಮೇಶ್ ಅವರು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಾವೇರಿ ತಾಲೂಕಿನ ಆಲದಕಟ್ಟಿಯ ಶ್ವೇತಾಳನ್ನ ಕಳೆದ 10 ತಿಂಗಳ ಹಿಂದೆ ಶಿಕ್ಷಕನಾಗಿದ್ದ ಅರಳೇಶ್ವರದ ವಿಶ್ವನಾಥ್‌ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಅಂದಿನಿಂದ ವಿಶ್ವನಾಥ ಮತ್ತು ಅತ್ತೆ ಗೌರಮ್ಮ ಹಿಂಸೆ ನೀಡಿದ್ದಾರೆ ಎಂದು ಉಮೇಶ್​ ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಕಲ್ಲೇಶಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ವಿಶ್ವನಾಥ್ ಮತ್ತು ಗೌರಮ್ಮನನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Share

Leave a Reply

Your email address will not be published. Required fields are marked *