ಒಡಿಶಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ :ಐವರು ದುರುಳರಿಂದ 6 ತಿಂಗಳು ಹೀನ ಕೃತ್ಯ!

ಹರಿಯಾಣ: ಒಡಿಶಾ ಮೂಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಐವರು ಕಾಮುಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ, ಬಲೆ ಬೀಸಿದ್ದಾರೆ.

ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಆಕೆ 2020ರ ಮಾರ್ಚ್‌ ತಿಂಗಳಲ್ಲಿ ಗೆಳತಿ ಜಮೀನಾಳನ್ನು ಭೇಟಿಯಾಗಲು ಹರಿಯಾಣದ ಹಿಸ್ಸಾರ್ ಬಂದಿದ್ದಾಳೆ. ಈ ವೇಳೆ ಯುವತಿಯನ್ನು ದುರುಳರು ಅಪಹರಿಸಿದ್ದರು. ಬಳಿಕ ಆಕೆಯನ್ನು ರಾಜ್ಯದ ವಿವಿಧ ಕಡೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ವಿವಿಧ ಪ್ರದೇಶಗಳಲ್ಲಿ ಬೆದರಿಕೆ ಹಾಕಿ ಆಕೆಯ ಮೇಲೆ ನಿರಂತರವಾಗಿ 6 ತಿಂಗಳ ಕಾಲ ಅತ್ಯಾಚಾರ ಮಾಡಿದ್ದಾರೆ.

ಯುವತಿಯೇ ಹೇಳಿರುವ ಪ್ರಕಾರ, ಯುವತಿಯನ್ನು ಬೇರೆ ಬೇರೆ ಯುವಕರಿಗೆ ವರ್ಗಾಯಿಸಿ, ಪ್ರಾಣ ಬೆದರಿಕೆ ಹಾಕಿ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಒಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದೆ ರಿಂಕು, ವಿಜಯ್, ದೇವಾ, ಗೆಳತಿ ಜಮೀನಾ ಮತ್ತು ನರ್ಮಿಳಾ ಎಂಬ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share