ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಟ್ವಿಸ್ಟ್: ಎನ್ ಐಎ ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

ಬೆಂಗಳೂರು :ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಬಾಂಗ್ಲಾದೇಶ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗ್ಯಾಂಗ್ ರೇಪ್ ಪ್ರಕರಣದ ಬೆನ್ನು ಬಿದ್ದಿದ್ದ ಎನ್ಐಎ ಪೊಲೀಸರಿಗೆ ಬೇರೆ ಬೇರೆ ದೇಶಗಳಿಗೆ ಯುವತಿಯರನ್ನು ಮಾನವ ಕಳ್ಳಸಾಗಣೆ ಮಾಡುತ್ತಿರೋ ಶಾಕಿಂಗ್ ವಿಚಾರ ತಿಳಿದುಬಂದಿದೆ. ಬಾಂಗ್ಲಾದೇಶ ದೇಶದಿಂದ ಸಮುದ್ರದ ಮೂಲಕ ಚೆನ್ನೈ ತಲುಪಿಸಿ,

ಅಲ್ಲಿಂದ ಕರ್ನಾಟಕ, ಕೇರಳ, ತಮಿಳು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಇಲ್ಲಿನ ಯುವಕ – ಯುವತಿಯನ್ನು ಬಳಸಿಕೊಳ್ಳುವುದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಇದೇ ಯುವತಿಯನ್ನು ಕೆಲ ಕಿಂಗ್ ಪಿನ್ ಗಳ ಸೂಚನೆಯಂತೆ ದೂರದ ಕೆನಡಾ ದೇಶಕ್ಕೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಎನ್ಐಎ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ.

Share

Leave a Reply

Your email address will not be published. Required fields are marked *