ರುಂಡ-ಮುಂಡ ಬೇರ್ಪಡಿಸಿ ವ್ಯಕ್ತಿಯ ಬರ್ಬರ ಹತ್ಯೆ :ಪ್ರೀತಿಗಾಗಿ ಬೀಳಿಸಿದರಂತೆ ಹೆಣ!

ಧಾರವಾಡ: ರುಂಡ-ಮುಂಡ ಬೇರ್ಪಡಿಸಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ ಮೂಲದ ನಿಯಾಜಹ್ಮದ ಕಟಿಗಾರ(21), ತೌಸೀಪ್ ಚನ್ನಾಪೂರ(21), ಅಲ್ತಾಫ್ ಮುಲ್ಲಾ(24), ಅಮನ ಗಿರಣಿವಾಲೆ(19) ಬಂಧಿತ ಆರೋಪಿಗಳಾಗಿದ್ದಾರೆ. ಏ. 10ರಂದು ಈ ಪ್ರಕರಣ ದಾಖಲಾಗಿದ್ದು, ವಾರದಲ್ಲಿಯೇ ಪ್ರಕರಣ ಭೇದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದರು.

ರಾಕೇಶ್ ಕಠಾರೆ(33) ಎಂಬ ವ್ಯಕ್ತಿಯನ್ನು ನಾಲ್ವರು ಕೊಲೆಗೈದು, ಶವವನ್ನು ಸುಟ್ಟು ಹಾಕಿ, ಅಂಗಾಗ ಬೇರ್ಪಡಿಸಿ ಬೇರೆ ಬೇರೆ ಜಾಗಗಳಲ್ಲಿ ಎಸೆದು ತಲೆಮರೆಸಿಕೊಂಡಿದ್ದರು. ನಿಯಾಜಹ್ಮದ ಕಟಿಗಾರ ರಾಕೇಶ್‌ನ ತಂಗಿಯನ್ನು ಪ್ರೀತಿಸಿದ್ದು, ಅದಕ್ಕೆ ರಾಕೇಶ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

Share