ಬಾಡಿ ಸ್ಪ್ರೇ, ಸಿರಿಂಜ್ ​ಗಳಲ್ಲಿ ಚಾಕೋಲೆಟ್ .ಕೊಳ್ಳೇಗಾಲದಲ್ಲಿ ಆತಂಕಕಾರಿ ಬೆಳವಣಿಗೆ!

ಚಾಮರಾಜನಗರ: ಸಿರಿಂಜ್ ಟ್ಯೂಬ್​ಗಳು, ಪರ್ಫ್ಯೂಮ್ ಬಾಟಲ್​ಗಳಲ್ಲಿ ಬಣ್ಣ ಮಿಶ್ರಿತ ಸಿಹಿ ದ್ರಾವಣ ಮಾರಾಟ ಮಾಡುತ್ತಿರುವ ಘಟನೆ ಕೊಳ್ಳೇಗಾಲದ ಸಣ್ಣಪುಟ್ಟ ಅಂಗಡಿಗಳಲ್ಲಿ ನಡೆಯುತ್ತಿದ್ದು, ಮಕ್ಕಳು ಆಕರ್ಷಿತರಾಗುತ್ತಿದ್ದಾರೆ.

ಇಂಜೆಕ್ಷನ್ ಚಾಕೋಲೆಟ್ ಎಂದೇ ಇವುಗಳು ಜನಪ್ರಿಯವಾಗುತ್ತಿದ್ದು, ಈ ಹಿಂದೆ ಪ್ಲಾಸ್ಟಿಕ್ ಟ್ಯೂಬ್​ನಲ್ಲಿ ಬರುತ್ತಿದ್ದ ಐಸ್ ಕ್ರೀಂನಂತೆ ಈಗ ಸಿರಿಂಜ್​ಗಳಲ್ಲಿ ತುಂಬುತ್ತಿದ್ದು ಸೂಜಿಯ ಭಾಗವನ್ನು ಕತ್ತರಿಸಿ ಸಿರಿಂಜ್ ಬಳುಸುತ್ತಿದ್ದಾರೆ. ಇದನ್ನು ಒಂದಕ್ಕೆ 5 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

ಮೆಡಿಕಲ್ ಸ್ಟೋರ್​ಗಳಲ್ಲಿ ಈ ಸಿರಿಂಜ್ ಒಂದರ ಬೆಲೆ 5 ರೂ. ಇದೆ. ಅಂತಹುದರಲ್ಲಿ ವ್ಯಾಪಾರಸ್ಥರು ಇಂಜೆಕ್ಷನ್ ಚಾಕೋಲೆಟ್​ಗಳನ್ನು 2.5 ರೂ.ಗೆ ಕೊಂಡು 5 ರೂ.ಗೆ ಮಾರಾಟ ಮಾಡುತ್ತಿರುವುದು ನೋಡಿದರೆ ಬಳಸಿ ಬಿಸಾಡಿದ ಸಿರಿಂಜ್​ಗಳನ್ನ ಅವೈಜ್ಞಾನಿಕವಾಗಿ ಮತ್ತು ಆತಂಕಕಾರಿ ರೀತಿಯಲ್ಲಿ ಬಳಸುತ್ತಿದ್ದಾರಾ ಎಂಬ ಆತಂಕ ಮೂಡಿದೆ.

ಕಣ್ಮುಚ್ಚಿ ಕುಳಿತ ಆರೋಗ್ಯ ಅಧಿಕಾರಿಗಳು: ಬೀದಿ ಬೀದಿಯಲ್ಲಿ ಈ ರೀತಿಯ ಇಂಜೆಕ್ಷನ್ ಚಾಕೋಲೆಟ್ ಮಾರಾಟವಾಗುತ್ತಿದ್ದರೂ ಆರೋಗ್ಯ ಇಲಾಖೆ, ಕೊಳ್ಳೇಗಾಲ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಮಕ್ಕಳು ಈ ಚಾಕೋಲೆಟ್ ತಿನ್ನಲು ಮುಗಿಬೀಳುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

Share

Leave a Reply

Your email address will not be published.