ಲೈವ್ ಮರ್ಡರ್ ವಿಡಿಯೋ :ಭೂ ವಿವಾದ ಸಂಬಂಧ ಜನರ ಎದುರೇ ಗುಂಡಿಕ್ಕಿ ವ್ಯಕ್ತಿ ಕೊಲೆ!

ಬಿಹಾರ: ಪೂರ್ವ ಚಂಪಾರಣ್ಯ​ ಜಿಲ್ಲೆಯ ತುರ್ಕೌಲಿಯಾ ಪೊಲೀಸ್​ ಠಾಣಾ ಪ್ರದೇಶದ ಮಂಜಾರ್​​ ಗ್ರಾಮದಲ್ಲಿ ಭೂ ವಿವಾದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಹಗಲು ಹೊತ್ತಿನಲ್ಲೇ ಗುಂಡು ಹಾರಿಸಲಾಗಿದ್ದು, ಗಾಯಗೊಂಡಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸುವ ವೇಳೆ ಸಾವನ್ನಪ್ಪಿದ್ದಾನೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಔಷಧ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಮನೆಯ ಪಕ್ಕದ ಯುವಕನೊಂದಿಗೆ ಜಗಳ ವಾಡುತ್ತಿದ್ದನು.

ಜಗಳ ತಾರಕ್ಕೇರುತ್ತಿದ್ದಂತೆ ಕೆಲವರು ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ವಿವೇಕ್​ ಕುಮಾರ್​ ಎಂಬ ವ್ಯಕ್ತಿ ಔಷಧ ಅಂಗಡಿಯವನ ಮೇಲೆ ಪಿಸ್ತೂಲ್​​ನಿಂದ ಗುಂಡಿಕ್ಕಿದ್ದಾನೆ. ಇದರ ವಿಡಿಯೋ ಮೊಬೈಲ್​​ನಲ್ಲಿ ಸೆರೆಯಾಗಿದೆ. ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

 

Share

Leave a Reply

Your email address will not be published.