ಮಹಾರಾಷ್ಟ್ರದಲ್ಲಿ ಕೊರೊನಾ ಹರಡಲು ವಲಸೆ ಕಾರ್ಮಿಕರೇ ಕಾರಣ :ರಾಜ್ ಠಾಕ್ರೆ

ಮಹಾರಾಷ್ಟ್ರ: ರಾಜ್ಯದಲ್ಲಿ ಕೊರೊನಾ ವೈರಸ್​ ವ್ಯಾಪಕವಾಗಿ ಹರಡಲು ವಲಸೆ ಕಾರ್ಮಿಕರೇ ಕಾರಣವೆಂದು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರವು ದೇಶದಲ್ಲೇ ಅತಿ ಹೆಚ್ಚು ಕೈಗಾರಿಕೆಗಳನ್ನೊಳಗೊಂಡ ರಾಜ್ಯವಾಗಿದೆ. ಹೀಗಾಗಿ ಇದು ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಆಕರ್ಷಿಸುತ್ತದೆ. ಈ ಕಾರ್ಮಿಕರಿಗೆ ಕೋವಿಡ್​ ಪರೀಕ್ಷೆ ಮಾಡುವಲ್ಲಿ ಸಾಕಷ್ಟು ಕೊರೆತೆಗಳಿವೆ ಎಂದು ಹೇಳಿದ್ರು.

ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಿಕೊಂಡು ಜಿಮ್​ಗಳು ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಸಿಎಂ ಉದ್ಧವ್​ ಠಾಕ್ರೆ ಬಳಿ ಮನವಿ ಮಾಡಿರುವುದಾಗಿಯೂ ತಿಳಿಸಿದ್ರು. ಮಹಾರಾಷ್ಟ್ರದಲ್ಲಿ ಸೋಮವಾರ ರಾತ್ರಿಯಿಂದ ವಿಧಿಸಲಾಗಿರುವ ಹೊಸ ನಿರ್ಬಂಧಗಳ ಕುರಿತು ಮಾತನಾಡುತ್ತಾ, ರಾಜ್ಯ ಸರ್ಕಾರ ಅಗತ್ಯ ಸೇವೆಗಳ ಅಂಗಡಿಗಳು,

ಮೆಡಿಕಲ್​ಗಳನ್ನು ಹೊರತುಪಡಿಸಿ ಕಿರಾಣಿ ಅಂಗಡಿಗಳು, ಎಲ್ಲಾ ಇತರ ಅಂಗಡಿಗಳು, ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಏಪ್ರಿಲ್ 30 ರವರೆಗೆ ಮುಚ್ಚಲಾಗುವುದು ಎಂದು ಹೇಳಿದೆ. ಆದರೆ ಈ ಎಲ್ಲಾ ಅಂಗಡಿಗಳನ್ನು ಕನಿಷ್ಠ ಎರಡು ಅಥವಾ ಮೂರು ದಿನಗಳವರೆಗೆ ತೆರೆಯಲು ಅವಕಾಶ ನೀಡಬೇಕೆಂದು ಹೇಳಿದರು.

ಕೊರೊನಾ ಲಾಕ್​ಡೌನ್​ನಿಂದಾಗಿ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರು ವಿದ್ಯುತ್​ ಬಿಲ್​ಗಳನ್ನು ಏಕೆ ಪಾವತಿಸಬೇಕು? ಎಂದು ರಾಜ್​ ಠಾಕ್ರೆ ಪ್ರಶ್ನಿಸಿದ್ರು. ಅನಿಲ್​ ದೇಶ್​ಮುಖ್ ಗೃಹ ಸಚಿವ ಸ್ಥಾನಕ್ಕೆ​ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿ ಹೋಟೆಲ್, ರೆಸ್ಟೋರೆಂಟ್​ಗಳಿಂದ ತಿಂಗಳಿಗೆ 100 ಕೋಟಿ ರೂ. ವಸೂಲಿ ಮಾಡಿ ಎಂದು ಪೊಲೀಸ್​ ಅಧಿಕಾರಿಗೆ ಹೇಳುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

Share

Leave a Reply

Your email address will not be published.