ಇಂದು ಮುಂಜಾನೆ ರಾಜಸ್ಥಾನದ ಬಿಕಾನೇರ್ ನಲ್ಲಿ ಭೂಕಂಪ

ಬಿಕಾನೆರ್: ರಾಜಸ್ಥಾನದ ಬಿಕಾನೇರ್​ನಲ್ಲಿ ಇಂದು ಮುಂಜಾನೆ ಭೂಕಂಪ ಉಂಟಾಗಿದ್ದು, ರಿಕ್ಟರ್​ ಮಾಪಕ ದಲ್ಲಿ 5.3 ತೀವ್ರತೆ ದಾಖಲಾಗಿದೆ. ಇಂದು ಮುಂಜಾನೆ 5.24 ಗಂಟೆ ಹೊತ್ತಿಗೆ ಭೂಮಿ ನಡುಗಿದ್ದಾಗಿ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ  ತಿಳಿಸಿದೆ. ಇಲ್ಲಿ ಭೂ ಮೇಲ್ಮೈನಿಂದ 110 ಕಿ.ಮೀ.ಆಳದಲ್ಲಿ ಭೂಮಿ ನಡುಗಿದ್ದು, ಬಿಕಾನೇರ್​ ಭೂಕಂಪನದ ಕೇಂದ್ರಬಿಂದುವಾಗಿತ್ತು ಎಂದೂ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಹಾಗೇ, ನಿನ್ನೆ ತಡರಾತ್ರಿ 2.10ರ ಹೊತ್ತಿಗೆ ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್​ನಲ್ಲಿಯೂ 4.1 ರಿಕ್ಟರ್​ ಪ್ರಮಾಣದಷ್ಟು ಭೂಮಿ ಕಂಪನವಾಗಿದೆ.

ಇಲ್ಲಿ ತುರಾ ಕೇಂದ್ರಬಿಂದುವಾಗಿದ್ದು, ಭೂಮಿಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಟ್ವೀಟ್ ಮಾಡಿದೆ. ದೇಶಾದ್ಯಂತ ಬಹುತೇಕ ಎಲ್ಲ ಕಡೆಗೂ ಸಿಕ್ಕಾಪಟೆ ಮಳೆಯಾಗುತ್ತಿದ್ದು, ಈ ಮಧ್ಯೆ ಅಲ್ಲಲ್ಲಿ ಭೂಕಂಪನವೂ ಉಂಟಾಗುತ್ತಿದೆ. ಸ್ವಲ್ಪ ದಿನಗಳ ಹಿಂದೆ ಮಣಿಪುರದಲ್ಲಿ 4.5ರಷ್ಟು ತೀವ್ರತೆಯುಳ್ಳ ಭೂಕಂಪನ ಆಗಿತ್ತು. ಇನ್ನೂ ಹಲವೆಡೆಗಳಲ್ಲಿ ಭೂಕುಸಿತ ಕೂಡ ಆಗುತ್ತಿದೆ.

Share

Leave a Reply

Your email address will not be published. Required fields are marked *