ಉತ್ತರಾಖಂಡ :ಐಐಟಿ ರೂರ್ಕಿಯ 88 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಡೆಹ್ರಾಡೂನ್ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿಯ ಸುಮಾರು 88 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಐಟಿ ಆವರಣದೊಳಗಿನ ಸೋಂಕಿತ ಎಲ್ಲಾ 88 ವಿದ್ಯಾರ್ಥಿಗಳನ್ನು ಗಂಗಾ ಹಾಸ್ಟೆಲ್‌ನಲ್ಲಿ ಇರಿಸಲಾಗಿದ್ದು,

ಇದನ್ನು ವಿಶೇಷ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದು ಸಂಸ್ಥೆಯ ವಕ್ತಾರರಾದ ಸೋನಿಕಾ ಶಿರಿವಾಸ್ತವ್​ ತಿಳಿಸಿದ್ದಾರೆ. ಪಾಸಿಟಿವ್​ ದೃಢಪಟ್ಟ ವಿದ್ಯಾರ್ಥಿಗಳನ್ನು ಹರಿದ್ವಾರ ವೈದ್ಯಕೀಯ ಅಧಿಕಾರಿಗಳ ವೀಕ್ಷಣೆಯಲ್ಲಿ ಇರಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು ಐದು ಹಾಸ್ಟೆಲ್‌ಗಳನ್ನು ಬಂದ್​ ಮಾಡಲಾಗಿದೆ.

ಆದರೆ, ಸಂಸ್ಥೆಯಲ್ಲಿ ನಡೆಯುವ ಆನ್‌ಲೈನ್ ತರಗತಿಗಳಿಗೆ ಯಾವುದೇ ಅಡಚಣೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಉತ್ತರಾಖಂಡದಲ್ಲಿ ಬುಧವಾರದಂದು 1,109 ಹೊಸ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 1,04,711 ಪ್ರಕರಣ ದಾಖಲಾಗಿವೆ.

 

Share

Leave a Reply

Your email address will not be published.