ದಾವಣಗೆರೆ: ಮುರುಗೇಶ್ ನಿರಾಣಿ ಅವರನ್ನ ಕ್ಯಾಬಿನೆಟ್ ಗೆ ಸೇರಿಸಿಕೊಂಡ ಹಿನ್ನೆಲೆ ಹರಿಹರದ ವಂಚನಾನಂದ ಶ್ರೀಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಜನವರಿ 14 ರಂದು ಹರಿಹರದ ಹರ ಜಾತ್ರೆಯಲ್ಲಿ ಸಿಎಂ ಬಳಿ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು.
ನಿರಾಣಿಯನ್ನು ಕ್ಯಾಬಿನೆಟ್ ಗೆ ಸೇರಿಸಿಕೊಂಡಿದಕ್ಕೆ ಸಿಎಂ ಯಡಿಯೂರಪ್ಪ ನವರಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ. ಈ ಮೂಲಕ ಮುರುಗೇಶ್ ನಿರಾಣಿ ಸಂಪುಟದಲ್ಲಿ ಒಳ್ಳೆಯ ಕೆಲಸ ಮಾಡುವಂತೆ ಶುಭವನ್ನು ಹಾರೈಸಿದ್ದಾರೆ.