ಟಾಲಿವುಡ್ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ಉದ್ಯಮಿ ಗೌತಮ್ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ನಿಮಗೆ ತಿಳಿದಿರುವ ವಿಚಾರ. ಮುಂಬೈನಲ್ಲಿ ನಡೆದ ಮದುವೆಗೆ ಎರಡೂ ಕುಟುಂಬದವರು ಹಾಗೂ ಆಪ್ತರು ಮಾತ್ರ ಹಾಜರಾಗಿದ್ದರು. ಮದುವೆ ಮುಗಿದ ನಂತರ ಪತಿ ಗೌತಮ್ ಜೊತೆ ಕಾಜಲ್ ಅಗರ್ವಾಲ್ ಮಾಲ್ಡೀವ್ಸ್ಗೆ ತೆರಳಿದ್ದು ಅಲ್ಲಿನ ಸುಂದರ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
ಈ ಫೊಟೋದಲ್ಲಿ ಕಾಜಲ್ ಅಗರ್ವಾಲ್ ಒಂದು ಕೆಂಪು ಬಣ್ಣದ ಔಟ್ಫಿಟ್ ಧರಿಸಿದ್ದಾರೆ. ಇದು ನೋಡಲು ಬಹಳ ಸರಳವಾಗಿದೆ. ಆದರೆ ಇದರ ಬೆಲೆ 13 ಸಾವಿರ ಅಂತೆ. ಆ ಬಟ್ಟೆಗೂ , ಬಟ್ಟೆಯ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಸೆಲಬ್ರಿಟಿಗಳು ಎಂದ ಮೇಲೆ ಅಷ್ಟೂ ಖರ್ಚು ಮಾಡದಿದ್ದರೆ ಹೇಗೆ. ಈ ಫೋಟೋದಲ್ಲಿ ಕಾಜಲ್ ಧರಿಸಿರುವ ಬಟ್ಟೆ, ಕಿವಿ ಓಲೆ, ಕ್ಯಾಪ್, ಸನ್ ಗ್ಲಾಸ್, ಸ್ಲಿಪ್ಪರ್ ಎಲ್ಲಾ ಸೇರಿ ಏನಿಲ್ಲಾ ಎಂದರೂ 50 ಸಾವಿರಷ್ಟು ಖರ್ಚಾಗಿದೆಯಂತೆ. ಇಷ್ಟು ಸಿಂಪಲ್ ಬಟ್ಟೆಗೆ ಕಾಜಲ್ ಇಷ್ಟು ಹಣ ಖರ್ಚು ಮಾಡಿದ್ದಾರೆ.
ಇನ್ನು ಪಾರ್ಟಿ, ಫಂಕ್ಷನ್ಗಳಿಗೆ ತೊಡುವ ಬಟ್ಟೆಗಳಿಗೆ ಇನ್ನೆಷ್ಟು ಖರ್ಚು ಮಾಡುತ್ತಾರೋ ಎಂದು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. ಆದರೆ ಕೆಲವರು ಈ ಬಟ್ಟೆ ಬೆಲೆ ಕಡಿಮೆ ಆಯ್ತು, ಕಾಜಲ್ ರೇಂಜ್ಗೆ ಇನ್ನೂ ಹೆಚ್ಚು ಹಣ ಕೊಟ್ಟು ಖರೀದಿಸಬಹುದಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಮದುವೆ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕಾಜಲ್ ಇದಕ್ಕೂ ಮುನ್ನವೇ ಹೇಳಿದ್ದರು. ಸದ್ಯಕ್ಕೆ ಅವರು ಭಾರತೀಯುಡು 2, ಆಚಾರ್ಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ನಂತರ ಮತ್ತೆ ಕಾಜಲ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.