ಹುಬ್ಬಳ್ಳಿ : ಆತ ಗ್ರಾಮದಲ್ಲೇ ವರ್ಲ್ಡ್ ಫೇಮಸ್ ಟೈಲರ್. ಯಾವ ಸ್ಟೈಲ್ನಲ್ಲಿ ಬೇಕಾದರೂ ಬಟ್ಟೆ ಹೊಲಿಯುವ ಚಾಣಾಕ್ಷ. ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರು ಅವನ ಅಂಗಡಿಗೆ ಬರುವ ಫಿಕ್ಸ್ ಗಿರಾಕಿಗಳು. ಸ್ಪೂರದ್ರೂಪಿ ಆಗಿರಲಿಲ್ಲವಾದರೂ ಮಾತಿನ ಮಲ್ಲನಾಗಿದ್ದ ದರ್ಜಿಯ ಮರ್ಜಿಗೆ ಮಾರು ಹೋಗಿದ್ದಳಂತೆ ಆ ಆಂಟಿ..
ಆಂಟಿಗೆ 35ರ ಹರೆಯ. ಅವನಿಗೆ 42 ವರ್ಷ. ಇಬ್ಬರಿಗೂ ಅವರವರ ಎತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ಗ್ರಾಮದಲ್ಲಿ ಇಬ್ಬರೂ ಸಜ್ಜನ ಕುಟುಂಬದವರೇ ಆಗಿದ್ದಾರೆ. ಇಬ್ಬರ ಮಧ್ಯೆ ಚಿಗುರೊಡೆದ ಪ್ರೀತಿಯನ್ನು ಇಬ್ಬರೂ ಸೇರಿ ಪೋಷಿಸಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಗ್ರಾಮ ಇಂತಹ ಮಧ್ಯ ವಯಸ್ಸಿನ ಪ್ರೇಮ ಪ್ರಕರಣವೊಂದರ ದುರಂತ ಅಂತ್ಯಕ್ಕೆ ಸಾಕ್ಷಿಯಾಗಿದೆ.
ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಪ್ರೇಮಿಯನ್ನು ಬಂಧಿಸಿದ್ದಾರೆ. ಅಪಹರಣ ಮತ್ತು ಅತ್ಯಾಚಾರ ಪ್ರಕರಣದಡಿಯಲ್ಲಿ ಪ್ರೇಮಿಯನ್ನು ಬಂಧಿಸಿ ಅಟ್ರಾಸಿಟಿ ಕೇಸ್ ಕೂಡ ಹಾಕಿ ಜೈಲಿಗಟ್ಟಿದ್ದಾರೆ. ಆರೋಪಿಯ ಜತೆಯಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿ ಗೋವಾದಿಂದ ಹುಬ್ಬಳ್ಳಿಗೆ ಕರೆ ತಂದಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪದಲ್ಲಿ ಆರೋಪಿ ಫೇಮಸ್ ಟೈಲರ್. ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳ ಮಾಡಿಕೊಂಡು ಹೆಂಡತಿ-ಮಕ್ಕಳಿಂದ ದೂರವಿದ್ದ. ಒಬ್ಬನೇ ಟೈಲರಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಹೇಗೋ ಈ ಮಹಿಳೆಯ ಪರಿಚಯವಾಗಿದೆ. ಟೈಲರ್ ಅಲ್ವಾ ಅದು ಇದು ಅಂತಾ ನೆಪ ಹೇಳಿ ಮಹಿಳೆಯ ಮನೆಗೆ ಆಗಾಗ ಬಂದು ಹೋಗ್ತಿದ್ದನಂತೆ.
ಮಾತಿನ ಮಲ್ಲನಾಗಿದ್ದ ಈ ಟೈಲರ್, ಮಹಿಳೆಯನ್ನು ಹೇಗೋ ಮರಳು ಮಾಡಿದ್ದಾನಂತೆ. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತಂತೆ. ಕಳೆದ ತಿಂಗಳು ರಾತ್ರಿ ವೇಳೆ ಪಾಲಿಕೊಪ್ಪದಿಂದ ಇಬ್ಬರೂ ಪರಾರಿಯಾಗಿದ್ದರಂತೆ. ಮರುದಿನವೇ ಮಹಿಳೆಯ ಗಂಡ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಗ ಇಬ್ಬರೂ ಗೋವಾದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನೆಟ್ವರ್ಕ್ ಟ್ರೇಸ್ ಮಾಡುತ್ತಾ ಹೋದ ಪೊಲೀಸರಿಗೆ ಟೈಲರ್ ಮತ್ತು ಮಹಿಳೆ ರೆಡ್ ಹ್ಯಾಂಡ್ ಆಗಿ ಗೋವಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಇಬ್ಬರನ್ನೂ ಹುಬ್ಬಳ್ಳಿಯ ಗ್ರಾಮೀಣ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ, ಎಲ್ಲವೂ ಉಲ್ಟಾಪಲ್ಟಾ ಆಗಿದೆ.
ನನಗೆ ಟೈಲರ್ ಯಾಮಾರಿಸಿ ಗೋವಾಗೆ ಕದೆಕೊಂಡು ಹೋಗಿದ್ದಾನೆ. ನನಗೆ ಅಲ್ಲಿಗೆ ಹೋಗಿದ್ದೇ ಅರಿವಿಲ್ಲ. ಏನೋ ಯಾಮಾರಿಸಿದ್ದಾನೆ ಅಂತಾ ಸಂತ್ರಸ್ತೆ ಹೇಳಿದ್ದಾಳೆ. ಪೊಲೀಸರು, ಆರೋಪಿತನ ವಿರುದ್ಧ ಅಪಹರಣ, ರೇಪ್ ಮತ್ತು ಅಟ್ರಾಸಿಟಿ ಕೇಸ್ ಹಾಕಿ ಜೈಲಿಗಟ್ಟಿದ್ದಾರೆ. ಅಟ್ರಾಸಿಟಿ ಕೇಸ್ ಆದ ಹಿನ್ನೆಲೆ ಡಿವೈಎಸ್ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.