ರಾಬರ್ಟ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?!

ಬಾಕ್ಸಾಫೀಸ್​ನಲ್ಲಿ ದುರ್ಯೋಧನ ಚಾಲೆಂಜಿಂಗ್ ಸ್ಟಾರ್ ದರ್ಶನ್​ ದರ್ಬಾರ್​ ಜೋರಾಗಿದೆ. ರಾಬರ್ಟ್ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದು ಸಂಚಲನ ಸೃಷ್ಟಿಸಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಶಿವರಾತ್ರಿ ದಿನದಂದು ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದ್ದು, ರಾಬರ್ಟ್ ಅಬ್ಬರ ಮುಂದುವರೆದಿದೆ.

ಕಲೆಕ್ಷನ್​ ಲೆಕ್ಕಾಚಾರದಲ್ಲಿ ದರ್ಶನ್​ ಕರಿಯರ್​​ನಲ್ಲೇ ರಾಬರ್ಟ್ ಸಿನಿಮಾ ಮೊದಲ ಸ್ಥಾನದಲ್ಲಿದೆ ಎನ್ನಲಾಗಿದೆ. ಸಾರಥಿ, ಸಂಗೊಳ್ಳಿ ರಾಯಣ್ಣ ಸಿನಿಮಾಗಳನ್ನ ದಾಖಲೆಗಳನ್ನ ಮೀರಿ, ರಾಬರ್ಟ್ ಅಬ್ಬರ ಜೋರಾಗಿದೆ. ನಿರ್ಮಾಪಕ ಉಮಾಪತಿ ಪ್ಯಾಷನ್, ನಿರ್ದೇಶಕ ತರುಣ್ ಮತ್ತವರ ತಂಡದ ಶ್ರಮ, ದೊಡ್ಡ ತಾರಾಗಣ ಎಲ್ಲವೂ ಚಿತ್ರಕ್ಕೆ ಪ್ಲಸ್​ ಆಗಿದ್ದು ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಇನ್ನೂ ರಾಬರ್ಟ್ ಮೊದಲ ದಿನದ ಕಲೆಕ್ಷನ್ 20 ರಿಂದ 25 ಕೋಟಿ ಎಂದು ಅಂದಾಜಿಸಲಾಗಿದೆ.

Share

1 thought on “ರಾಬರ್ಟ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?!

Comments are closed.