ಪ್ರತಿಪಕ್ಷದ ನಾಯಕರುಗಳ ಸಹಕಾರ ಸಿಕ್ಕರೆ ನಾನು ಸಹ ಮುಖ್ಯಮಂತ್ರಿ ಆಗುತ್ತೇನೆ: ಬೆಂಗಳೂರಿನಲ್ಲಿ ಸಚಿವ ಉಮೇಶ್ ಕತ್ತಿ ಹೇಳಿಕೆ

ಬೆಂಗಳೂರು:ನಾನೂ ಎಂಟು ಬಾರಿ ಶಾಸಕನಾಗಿದ್ದೇನೆ. ನಾನೂ ಮುಖ್ಯಮಂತ್ರಿಯಾಗಿ ರಾಜ್ಯವಾಳಬೇಕೆಂಬ ಆಸೆಯಿದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಯಡಿಯೂರಪ್ಪ ಸಮನಾಗಿದ್ದೇನೆ. ನನಗೆ ಇನ್ನೂ 15 ವರ್ಷ ಅವಕಾಶ ಇದೆ. ಯಾವತ್ತಾದರೂ ಒಂದು ಒಂದು ದಿನ ಮುಖ್ಯಮಂತ್ರಿಯಾಗುತ್ತೇನೆ ಎಂಬ ಭರವಸೆಯಿದೆ ಎಂದು ತಾನೂ ಸಿಎಂ ರೇಸ್ ನಲ್ಲಿ ಇರುವುದಾಗಿ ಹೇಳಿದ್ದಾರೆ.
ನಾನು ಈಗ ಹೈಕಮಾಂಡ್ ಭೇಟಿಗೆ ಹೋಗುವುದಿಲ್ಲ. ಬಿಜೆಪಿಯಲ್ಲಿ 75 ವರ್ಷದ ಲಿಮಿಟ್ ಇದೆ. ಯಡಿಯೂರಪ್ಪ ಅವರಿಗೆ 80 ವರ್ಷ ಹತ್ತಿರವಾಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಅವರೂ ಬದ್ದರಾಗಿತ್ತಾರೆ. ನಾವೂ ಬದ್ದರಾಗಿರುತ್ತೇವೆ ಎಂದರು.
ಯಡಿಯೂರಪ್ಪ ಅವರಿಗೆ ಗೌರವಯುತ ನಿರ್ಗಮನವಾಗಬೇಕು. ಅವರು ಪಕ್ಷದ ತೀರ್ಮಾನವನ್ನು ಗೌರವಿಸುತ್ತಾರೆ. ಅವರು ಪಕ್ಷಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಪಕ್ಷವೂ ಅವರಿಗೆ ಗೌರವ ಕೊಡುತ್ತದೆ ಎಂದ ಉಮೇಶ್ ಕತ್ತಿ, ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಬೇಕು ಎನ್ನುವ ಬೇಡಿಕೆಯಿದೆ. ಆ ಭಾಗದ ಯಾವುದೇ ಸಮುದಾಯದವರು ಸಿಎಂ ಆದರೂ ಸಹಕಾರ ನೀಡುತ್ತೇವೆ. ಆ ಭಾಗದಲ್ಲಿ ಲಿಂಗಾಯತ ಸಮುದಾಯ ಶಾಸಕರು ಹೆಚ್ಚಿದ್ದಾರೆ. ಯಾರನ್ನೇ ಸಿಎಂ ಮಾಡಿದರೂ ಸ್ವಾಗತವಿದೆ ಎಂದರು.

Share

Leave a Reply

Your email address will not be published. Required fields are marked *