ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ಭೇಟಿ. ಶಾಲೆಗಳ ಆರಂಭಕ್ಕೆ ಸೋಮವಾರ‌ ನಂತರ ನಿರ್ಧಾರ.

ಕೆಆರ್ ಪುರ ಮತ್ತು ಮಹದೇವಪುರ ಕ್ಷೇತ್ರದ ಇಂದು ಎರಡನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ
ಸುರೇಶ್ ಕುಮಾರ್ ಭೇಟಿ ನೀಡಿದರು.

ಮೊದಲಿಗೆ ಕೆ.ಆರ್.ಪುರದ ಐಟಿಐ ವಿದ್ಯಾ ಮಂದಿರ ‌ಶಾಲೆ, ಕೆಆರ್ ಪುರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ, ವೆಂಕಟೇಶ್ವರ ಆಂಗ್ಲ ಶಾಲೆ ಹಾಗೂ ಮಹದೇವಪುರದ
ಆವಲಹಳ್ಳಿ, ಕಾಡುಗೋಡಿ ಭಾಗದ 10 ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನಿರಾತಂಕವಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಎಂದು‌ ತಿಳಿಸಿದರು.

ನಂತರ ಮಾತನಾಡಿದ ಸಚಿವರು ರಾಜ್ಯದಲ್ಲಿ ಇಂದು ಎಸ್ ಎಸ್‌ ಎಲ್‌ ಸಿ ಮಕ್ಕಳ ಎರಡನೇ‌ ದಿನದ ಪರೀಕ್ಷೆ ನಡೆಯುತ್ತಿದೆ.ಮೊದಲ ದಿನದ ಪರೀಕ್ಷೆಯಲ್ಲಿ ಗಣಿತ,ವಿಜ್ಞಾನ, ಸಮಾಜ ವಿಷಯಗಳು ಮುಗಿದಿದ್ದು,
ಇಂದು ಕನ್ನಡ,ಇಂಗ್ಲಿಷ್, ಹಿಂದಿ ವಿಷಯಗಳ ಪರೀಕ್ಷೆ ಇಂದು ನಡೆಯುತ್ತಿದೆ ಯಾವುದೇ ರೀತಿಯ ತೊಂದರೆಗಳಿಲ್ಲದೆ ನಡೆಯುತ್ತಿದೆ.ರಾಜ್ಯಾದ್ಯಂತ 99.6 % ವಿದ್ಯಾರ್ಥಿಗಳು ಪರಿಕ್ಷೇಯಲ್ಲಿ ಭಾಗಿಯಾಗಿದ್ದಾರೆ ಎಂದರು.ನಿನ್ನೆ ಮೊನ್ನೆ ಎಲ್ಲಾ ಜಿಲ್ಲಾಧಿಕಾರಿ ಮತ್ತು ಬಿಎ‌ಒ ಗಳ‌ ಜೊತೆಗೆ ಮಾತನಾಡಿ ಇಂದಿನ ಪರೀಕ್ಷೆ ನಡೆಸುವ‌ ಬಗ್ಗೆ‌ ಸಭೆಗಳನ್ನು ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇಂದು ಎಲ್ಲಾ ಮಕ್ಕಳು ಲವಲವಿಕೆಯಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.

ಶಾಲೆಗಳು ಪುನರಾರಂಭಕ್ಕೆ ಇನ್ನೂ ಆಲೋಚನೆ ಮಾಡಿಲ್ಲ, ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದ್ದು ಸೋಮವಾರ ಆಯುಕ್ತರು ವರದಿ ನೀಡಲಿದ್ದು ಅವರು ಶಾಲೆಗಳ ಆರಂಭಿಸುವ ಬಗ್ಗೆ ಅಧ್ಯಯನ ಮಾಡಿ ಚರ್ಚೆಗಳನ್ನ ಮಾಡಿ ನಮಗೆ ಒಂದು ವರದಿ ಕೊಡುತ್ತಿದ್ದಾರೆ.ಐಸಿಎಂಆರ್ ನಿಂದಲೂ ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ವರದಿ ಬಂದಿದೆ.ಮತ್ತು ದೇವಿ ಶೆಟ್ಟಿ ಅವರು ಕೊಟ್ಟಿರುವ ವರದಿಯನ್ನು ಅಧ್ಯಯನ ಮಾಡಿ ತದನಂತರ ಶಾಲೆಗಳನ್ನು ಅರಂಭಿಸುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

Share

Leave a Reply

Your email address will not be published. Required fields are marked *