ಮುಖದ ಮೇಲಿನ ಮೊಡವೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು.!

ಮೊಡವೆಗಳು ಮುಖದ ಸೌಂದರ್ಯವನ್ನು ಹಾಳುಗೆಡುವುತ್ತದೆ. ಇದು ಸಾಮಾನ್ಯ ಸಮಸ್ಯೆಯಾಗಿದ್ದರೂ ನಿರ್ಲಕ್ಷ್ಯವಹಿಸುವಂತಿಲ್ಲ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಪಿಂಪಲ್ ಕ್ರೀಮ್​ಗಳು ಲಭ್ಯವಿದೆ. ಆದರೆ ಅವುಗಳ ಬಳಕೆಯಿಂದ ನಿಮ್ಮ ತ್ವಚೆಯ ನೈಸರ್ಗಿಕ ಕಾಂತಿ ಕಳೆದುಕೊಳ್ಳಬಹುದು. ಹೀಗಾಗಿ ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ಮನೆ ಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಉತ್ತಮ. ಹಾಗಿದ್ರೆ ಮೊಡವೆ ಸಮಸ್ಯೆಗಳನ್ನು ಸುಲಭವಾಗಿ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ನೋಡೋಣ.

ಮಜ್ಜಿಗೆ: ಮೊಸರು ಹಾಗೂ ಮಜ್ಜಿಗೆ ಎಲ್ಲೆಡೆಯು ಸಿಗುವಂತಹ ವಸ್ತು. ಇದರಲ್ಲಿ ಲ್ಯಾಕ್ಟಿಕ್ ಆಮ್ಲವಿರುವುದರಿಂದ ತ್ವಚೆಯಲ್ಲಿ ಹಾನಿಯಾದ ಕೋಶವನ್ನು ಸರಿಪಡಿಸುತ್ತದೆ. ಹಾಗೆಯೇ ಹೊಸ ಕೋಶ ಬೆಳವಣಿಗೆಗೂ ಸಹಾಯಕ. ಹೀಗಾಗಿ ಮೊಡವೆ ಹೊಂದಿರುವವರು ಪ್ರತಿದಿನ ಒಂದು ಅಥವಾ ಎರಡು ಬಾರಿ ಮಜ್ಜಿಗೆ ನೀರಿನಿಂದ ಮುಖ ತೊಳೆಯುವುದು ಉತ್ತಮ. ಇದರಿಂದ ಮೊಡವೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು.

ಜೇನುತುಪ್ಪ: ನೈಸರ್ಗಿಕ ಜೇನುತುಪ್ಪ ನಿಮ್ಮ ಬಳಿ ಇದ್ದರೆ ಅದನ್ನು ಕೂಡ ಮೊಡವೆಗೆ ಮನೆಮದ್ದಾಗಿ ಬಳಸಬಹುದು. ಮೊಡವೆ ಇರುವ ಜಾಗಗಳಲ್ಲಿ ಜೇನನ್ನು ಹಚ್ಚಿನ ಸ್ವಲ್ಪ ಸಮಯದ ನಂತರ ಮುಖ ತೊಳೆದುಕೊಳ್ಳಿ. ಇದರಿಂದ ತ್ವಚೆಯು ತೇವಾಂಶದಿಂದ ಕೂಡಿರುವುದಲ್ಲದೆ, ಮೊಡವೆಯ ಸಮಸ್ಯೆಯನ್ನು ದೂರ ಮಾಡುತ್ತದೆ.

ಅಡುಗೆ ಸೋಡಾ: ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿ ಅದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಇದು ಮುಖದಲ್ಲಿರುವ ಎಣ್ಣೆ ಅಂಶವನ್ನು ಹೋಗಲಾಡಿಸುತ್ತದೆ. ಇದರಿಂದ ಕೂಡ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.

ಮೊಟ್ಟೆ: ಮೊಡವೆಗಳ ಮನೆಮದ್ದುಗಳಲ್ಲಿ ಮೊಟ್ಟೆ ಕೂಡ ಒಂದು. ಮೊಟ್ಟೆಯಲ್ಲಿರುವ ಬಿಳಿ ಭಾಗದ ಲೋಳೆಯನ್ನು ಮೊಡವೆ ಜಾಗಕ್ಕೆ ಅನ್ವಯಿಸಿ, ಒಣಗಲು ಬಿಡಿ. ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಕಾಣಬಹುದು.

ಶ್ರೀಗಂಧ: ನಿಮ್ಮ ತೆಲು ಚರ್ಮವಾಗಿದ್ದರೆ ತುಂಬಾ ಎಚ್ಚರವಹಿಸಬೇಕಾಗುತ್ತದೆ. ಇಂತಹ ಚರ್ಮಗಳಲ್ಲಿ ಅತಿಯಾದ ಉಷ್ಣಾಂಶದಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ವೇಳೆ ತ್ವಚೆಯನ್ನು ತಂಪಾಗಿಸುವುದು ಅಗತ್ಯ. ಇದಕ್ಕೆ ನೀವು ಮಾಡಬೇಕಿರುವುದು ಶ್ರೀಗಂಧದ ಪುಡಿಯನ್ನು ಸ್ವಲ್ಪ ನೀರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಅದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಸಂಪೂರ್ಣ ಒಣಗಿದ ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಮೊಡವೆಗಳು ಕಡಿಮೆಯಾಗುತ್ತದೆ.

ಪಪ್ಪಾಯ: ಪರಂಗಿ ಹಣ್ಣು ಅಥವಾ ಪಪ್ಪಾಯ ಹಣ್ಣಿನ ಒಳ ಭಾಗದ ತುಂಡನ್ನು ಮೊಡವೆ ಇರುವ ಜಾಗಕ್ಕೆ ಅನ್ವಯಿಸುವುದರಿಂದ ಮೊಡವೆಗಳು ನಿವಾರಣೆಯಾಗುತ್ತದೆ. ಹೀಗೆ ಅನ್ವಯಿಸುವ ವೇಳೆ ತುಂಬಾ ಹಣ್ಣಾಗಿರುವ ಪಪ್ಪಾಯವನ್ನು ಆರಿಸಿಕೊಳ್ಳುವುದು ಉತ್ತಮ. ಇದರಿಂದ ಹಣ್ಣಿನ ರಸ ಚರ್ಮದೊಳಕ್ಕೆ ಹೋಗಿ ತ್ವಚೆಯ ಕೋಶದ ಬೆಳವಣಿಗೆ ಸಹಕರಿಸುತ್ತದೆ. ಹೀಗೆ ಅನ್ವಯಿಸಿ ತುಸು ಒಣಗಿದ ಬಳಿಕ ಮುಖ ತೊಳೆದುಕೊಳ್ಳಿ.

Share

Leave a Reply

Your email address will not be published. Required fields are marked *