ಬಿಎಸ್ ವೈ ರನ್ನು ಸಿಎಂ ಸ್ಥಾನದಿಂದ ತೆಗೆಯೋದ್ರಿಂದ ಲಾಭವೇನಿಲ್ಲ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಬಿ ಎಸ್ ಯಡಿಯೂರಪ್ಪನವರು ಕರ್ನಾಟಕದಲ್ಲಿ ಕೆಟ್ಟ ಸರ್ಕಾರವನ್ನು ಕೊಟ್ಟಿದ್ದಾರೆ, ಅಭಿವೃದ್ಧಿಪರ ಇಲ್ಲದಿರುವ ಭ್ರಷ್ಟಾತಾರದಲ್ಲಿ ಕೂಡಿರುವ ಅದಕ್ಷ ಸರ್ಕಾರವನ್ನು ಕರ್ನಾಟಕದಲ್ಲಿ ನೀಡಿದರು, ಹೀಗಾಗಿ ಸಿಎಂ ಸ್ಥಾನದಿಂದ ಯಡಿಯೂರಪ್ಪನವರು ಕೆಳಗಿಳಿದರೆ ಏನೂ ನಷ್ಟವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಅತ್ಯಂತ ಕೆಟ್ಟ ಭ್ರಷ್ಟ ಸರ್ಕಾರ ನೀಡಿದ್ದಾರೆ.
ಯಡಿಯೂರಪ್ಪನವರೇ ಭ್ರಷ್ಟ, ಅವರ ಮಗನೂ ಭ್ರಷ್ಟ, ಹಾಗಾಗಿ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರೆ ಬಹಳ ಒಳ್ಳೆಯದು ಎಂದು ಹೇಳಿದ್ದಾರೆ. ನಾನು ಸುಮಾರು ಆರೇಳು ತಿಂಗಳಿನಿಂದ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ತೆಗೆಯುತ್ತಾರೆ ಎಂದು ಹೇಳುತ್ತಾ ಬಂದಿದ್ದೆ. ಅದನ್ನು ಯಾರೂ ನಂಬಿರಲಿಲ್ಲ. ನನಗೆ ಖಚಿತ ಮಾಹಿತಿ ಇತ್ತು, ಇವತ್ತು ಅದು ಸತ್ಯವಾಗಿದೆ. ಯಡಿಯೂರಪ್ಪನವರನ್ನು ತೆಗೆಯುವುದರಿಂದ ಬಿಜೆಪಿಯಲ್ಲಿ ಮತ್ತೊಬ್ಬ ಪ್ರಾಮಾಣಿಕ ಮುಖ್ಯಮಂತ್ರಿ ಬರುತ್ತಾರೆ ಎಂದು ನಾನು ಅಂದುಕೊಂಡಿಲ್ಲ. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ , ಅದರಲ್ಲಿರುವ ಸಚಿವರುಗಳೂ ಭ್ರಷ್ಟರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Share

Leave a Reply

Your email address will not be published. Required fields are marked *