ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ ಯಾವ ಅಂಶಗಳನ್ನು ಪಾಲಿಸಬೇಕು ಗೊತ್ತಾ..?

ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.

ಯಶಸ್ಸಿನ ಹಾದಿ ಸುಲಭವಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಒಬ್ಬ ಯಶಸ್ವಿ ಮನುಷ್ಯನ ಹಿಂದೆ ಸಾಕಷ್ಟು ಹೋರಾಟವಿರುತ್ತದೆ. ನಮ್ಮ ಪ್ರೀತಿಯ ಮೇಷ್ಟ್ರು ದಿವಂಗತ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಹೇಳುತ್ತಾರೆ: “ಯಶಸ್ಸಿನ ಕಥೆಯನ್ನು ಓದಿದರೆ ಕೇವಲ ನಿಮಗೊಂದು ಸಂದೇಶ ಸಿಗಬಹುದು ಆದರೆ ಸೋಲಿನ ಕಥೆಗಳಿಂದ ಗೆಲುವಿನ ದಾರಿಯಲ್ಲಿ ಸಹಾಯವಾಗುವುದು” ಎಂದು.

ಯಶಸ್ಸಿನ ಹಾದಿಯಲ್ಲಿ ಅಂಶಗಳನ್ನು ಅನುಸರಿಸಿನಡೆಯುವ ದಾರಿಯನು ಸುಗಮಗೊಳಿಸಿ

  1. ಮೊಟ್ಟಮೊದಲನೇಯದಾಗಿ ನಿಮ್ಮನ್ನು ನೀವು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿಯೊಬ್ಬನ ಹೋರಾಟ ಬೇರೆಯೇ
  2. ನಿಮಗೆ ಕೊಟ್ಟ ಎಲ್ಲಾ ಕೆಲಸಗಳು ತುಂಬಾನೆ ಸುಲಭವಾಗಿರುತ್ತವೆ. ಆದರೆ ಅದನ್ನು ಮಾಡಲು ನೀವು ಸೋಮಾರಿತನ ಮಾಡಿ, ನಾಳೆ ಮಾಡುತ್ತೇನೆ ಎಂದು ಮುಂದೂಡುತ್ತಿದ್ದರೆ ಯಶಸ್ಸು ಕಷ್ಟ.
  3. ಯಾರೊಂದಿಗೂ ಪೈಪೋಟಿ ಮಾಡಬೇಡಿ. ಅದರಿಂದ ಅಸಮಾಧಾನ ಅತೃಪ್ತಿಯ ವಿನಃ ಏನೂ ಪ್ರಯೋಜನವಿಲ್ಲ.
  4. ಯಶಸ್ಸಿನ ಹಾದಿಯಲ್ಲಿ ಮಾರ್ಗದರ್ಶಕರಿರಲಿ ಆದರೆ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ನಿಮ್ಮ ದಾರಿಯಲ್ಲಿ ನೀವೇ ನಡೆಯಬೇಕು
  5. ಎಲ್ಲದಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸವಿರಲಿ. ಅನುಮಾನದಿಂದ ಮಾಡಿದ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ.
  6. ಆತ್ಮೀಯರೊಂದಿಗೆ ಸರಿ ತಪ್ಪುಗಳ ವಿಮರ್ಶೆ ಅತ್ಯಗತ್ಯ. ಯಾರಾದರೂ ಒಳ್ಳೆಯ ಸಲಹೆ ಕೊಟ್ಟರೆ ಪರಗಣಿಸದಿದ್ದರೂ ಸರಿ ನಿರಾಕರಿಸಬೇಡಿ.
  7. ನೀವು ಯಶಸ್ವಿಯಾಗಲು ಮತ್ತೊಬ್ಬರನ್ನು ತುಳಿಯಬೇಡಿ. ಒಂದೊಮ್ಮೆ ನೀವು ಯಶಸ್ವಿಯಾದರೂ ಆ ಅಪರಾಧಿ ಪ್ರಜ್ಞೆ ಬಾಧಿಸದೇ ಬಿಡದು.
  8. ಯಾವುದೇ ಕೆಲಸದ ಕುರಿತಂತೆ ಒಂದು ಒಳ್ಳೆ ಗಟ್ಟಿ ನಿರ್ಧಾರ ತೆಗೆದುಕೊಂಡು ಮುನ್ನೆಡೆಯಿರಿ.
  9. ನಿಮಗೆ ಆಫೀಸ್‌‌ನಲ್ಲಿ ಈ ಹಿಂದೆ ಯಾರಾದರು ಏನಾದರು ಮಾಡಿದರೆ ಅದಕ್ಕಾಗಿ ಅವರ ಮೇಲೆ ಇಂದಿಗೂ ಕೋಪ ಮಾಡುತ್ತ ಕೂರುತ್ತೀರಿ. ಇದರಿಂದ ಕೆಲಸ ಮಾಡುವಲ್ಲಿ ನಿಮಗೆ ಸಹಕಾರ ಸಿಗೋದಿಲ್ಲ.
  10. ಯಾವಾಗಲೂ ಬರೀ ಕೆಲಸದಲ್ಲೇ ತಲ್ಲೀನರಾಗದೆ, ನಿಮ್ಮ ಬೇರೆ ಮನರಂಜನೆ ಕಾರ್ಯಕ್ರಮಗಳಿಗೆ ಸಮಯ ಕೊಡಿ.
  11. ನೀವು ಶಾರೀರಿಕ ಮತ್ತು ಮಾನಸಿಕವಾಗಿ ಸಧೃಢರಾಗಿದ್ದರೆ ಮಾತ್ರ ಕೆಲಸದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಆದರೆ ನೀವು ಏನೇನೋ ತಿಂದು ಆರೋಗ್ಯ ಕೆಡಿಸಿದರೆ ಅಥವಾ ಮಾನಸಿಕವಾಗಿ ತುಂಬಾ ಕುಂದಿಹೋಗಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ.
  12. ಕೆಲಸದ ಅವಧಿಯಲ್ಲಿ ಹೆಚ್ಚಿನ ಸಮಯ ಸೋಶಿಯಲ್‌ ಮೀಡಿಯಾ ನೋಡುತ್ತ ಕಳೆದರೆ ನಿಮಗೆ ಯಶಸ್ಸು ಸಿಗಲು ಹೇಗೆ ಸಾಧ್ಯ ಹೇಳಿ. ಇದರಿಂದ ಸಮಯ ವೇಸ್ಟ್‌ ಆಗುತ್ತದೆ ಅಷ್ಟೆ.
  13. ಕೊನೆಯದಾಗಿ ಏನೆಂದರೆ ನೀವು ಯಶಸ್ಸು ಸಾಧಿಸಬೇಕು ಎಂದಾದರೆ ಜೀವನದಲ್ಲಿ ಏನಾದರು ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿರಬೇಕು. ಇಲ್ಲವಾದರೆ ಸಕ್ಸಸ್‌ ನಿಮ್ಮತ್ತ ಸುಳಿಯೋದೆ ಇಲ್ಲ.

 

Share

Leave a Reply

Your email address will not be published. Required fields are marked *