ಬಿಎಸ್ವೈ ಸಂಪೂರ್ಣವಾಗಿ ಅಧಿಕಾರ ಪೂರೈಸಬೇಕು: ತಿಪಟೂರು ಮಠದ ಷಡಕ್ಷರಿ ರುದ್ರಮುನಿ ಸ್ವಾಮೀಜಿ ಒತ್ತಾಯ

ಯಡಿಯೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡಿಯೂರಪ್ಪ. ಅವರನ್ನು ಬದಲಾವಣೆ ಮಾಡುತ್ತಿರುವುದು ನಮಗೆಲ್ಲ ನೋವು ತಂದಿದೆ. ಬಿಎಸ್ವೈ ಸಂಪೂರ್ಣವಾಗಿ ಅಧಿಕಾರ ಪೂರೈಸಬೇಕು ಎಂದು ತಿಪಟೂರು ಮಠದ ಷಡಕ್ಷರಿ ರುದ್ರಮುನಿ ಸ್ವಾಮೀಜಿ ಒತ್ತಾಯಿಸಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪನವರು ನಮ್ಮ ಸಮಾಜದ ಘನತೆ ಮತ್ತು ಅಮೂಲ್ಯವಾದ ಮುತ್ತು, ರತ್ನ ಇದ್ದಾಂಗೆ. ಅವರನ್ನು ಕೆಳಗಿಳಿಸುವಂತಹ ಷಡ್ಯಂತ್ರವವನ್ನು ಸ್ವ ಪಕ್ಷದವರೇ ಮಾಡುತ್ತಿರುವುದು ನಮ್ಮ ಮಠಾಧೀಶರಿಗೆ ಬಹಳ ನೋವು ತಂದಿದೆ ಎಂದರು. ಸಿಎಂ ಬದಲಾವಣೆ ಮಾಡಿದರೆ ಕರ್ನಾಟಕದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತ ವೀರಶೈವ ಸಮಾಜ ಕೈಕಟ್ಟಿ ಕುಳಿತುಕೊಳ್ಳಲ್ಲ. ಪ್ರಶ್ನಾತೀತ ನಾಯಕ ಯಡಿಯೂರಪ್ಪನವರನ್ನು ಕೆಳಗಿಸಿಸುವ ಪ್ರಯತ್ನ ಮಾಡಿದ್ರೆ ರಾಜ್ಯದಲ್ಲಿ ಬಿಜೆಪಿ ಉಳಿಯಲ್ಲ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಆದರಿಂದ ಬಿಎಸ್ವೈ ಅವರಿಗೆ ಪೂರ್ಣಾವಧಿಗೆ ಅಧಿಕಾರ ನಡೆಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

Share

Leave a Reply

Your email address will not be published. Required fields are marked *