ಕೊರೊನಾ ಉಲ್ಬಣ :ಬೆಂಗಳೂರಿನಲ್ಲಿ ಇಂದಿನಿಂದ ಸೆಕ್ಷನ್ 144 ಜಾರಿ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಗರಾದ್ಯಂತ ಸೆಕ್ಷನ್ 144 ವಿಧಿಸಲಾಗುವುದು ಎಂದು ತಿಳಿದುಬಂದಿದೆ. ಬೆಂಗಳೂರು ನಗರದ ಮಿತಿಯಲ್ಲಿರುವ ಅಪಾರ್ಟ್ಮೆಂಟ್ / ವಸತಿ ಸಂಕೀರ್ಣಗಳಲ್ಲಿ ಈಜುಕೊಳ, ಜಿಮ್ನಾಷಿಯಂ, ಪಾರ್ಟಿ ಹಾಲ್ಸ್ ಮುಂತಾದ ಸೌಲಭ್ಯಗಳ ಕಾರ್ಯಾಚರಣೆಯನ್ನು ನಿಷೇಧಿಸಿ” ಆದೇಶಿಸಲಾಗಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್, ಕೊರೊನಾ ಸೋಂಕು ನಿಯಂತ್ರಿಸಲು ಈಗಾಗಲೇ ಹೊರಡಿಸಿರುವ ಕೋವಿಡ್ ಶಿಷ್ಟಾಚಾರ ಜಾರಿಯಲ್ಲಿದೆ. ಇದಕ್ಕೆ‌‌ ಪೂರಕವಾಗಿ ಏ.21 ರ ವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇಂದೂ ಕೂಡಾ ಬೆಂಗಳೂರಿನಲ್ಲಿ 5066 ಹೊಸ ಕೊವಿಡ್​ ಪ್ರಕರಣಗಳು ವರದಿಯಾಗಿವೆ. ನಿತ್ಯ ಪ್ರಕರಣ ಸಂಖ್ಯೆ ಏರುತ್ತಲೇ ಸಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಂತಿದೆ.

 

Share

Leave a Reply

Your email address will not be published.