ಬೆಳ್ಳಂಬೆಳಗ್ಗೆ ಲೈವ್ ಬಂದ ನಟ ಜಗ್ಗೇಶ್ ನಿನ್ನೆ ನಡೆದ ಘಟನೆ ಸೇರಿದಂತೆ ಪತ್ರಿಕೆಯೊಂದರ ಲೇಖನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪತ್ರಿಕೆಯೊಂದರ ಲೇಖನ ಓದಿ ಲೈವ್ ಬಂದ ಜಗ್ಗೇಶ್, ಆ ಲೇಖನದ ಬಗ್ಗೆ ಕಿಡಿಕಾರಿದ್ದಾರೆ. ಚಿತ್ರೀಕರಣ ನಡೆಯುವ ವೇಳೆ, ಅಷ್ಟೊಂದು ಜನ ಏಕಾಏಕಿ ನುಗ್ಗಿದ್ದಕ್ಕೆ ಸ್ವಲ್ಪ ಆಶ್ಚರ್ಯವಾಯಿತು. ನಾನೊಬ್ಬ ಆರ್ಎಸ್ಎಸ್ ಕಾರ್ಯಕರ್ತ.
ಸಹಜವಾಗಿಯೇ ಒಂದು ಪತ್ರಿಕೆಯ ಬಗ್ಗೆ ಮಾತನಾಡಿದ್ದೇನೆ. ಇದರಿಂದ ಬೇರೆ ಪತ್ರಿಕೆಗಳಿಗೆ ಸಿಟ್ಟು ಬಂದಿರಬಹುದು. ಆದರೆ, ಈ ವಿಷಯವನ್ನಿಟ್ಟುಕೊಂಡು ಹೀಗೆ ಮಾಡುವುದು ಸರಿಯಲ್ಲ. ಬಟಾಬಯಲಾಗುವುದಕ್ಕೆ ಏನಿದೆ. ನಾನು ಕಳ್ಳತನ ಮಾಡಿದ್ದೀನಾ? ಯಾರಿಗಾದರೂ ಅನ್ಯಾಯ ಮಾಡಿದ್ದೀನಾ? ನಾನು ಯಾರ ಬಗ್ಗೆಯೂ ಕೆಟ್ಟದ್ದನ್ನು ಮಾತನಾಡಿಲ್ಲ ಅಥವಾ ಯಾರಿಗೂ ಅವಮಾನ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
https://www.pscp.tv/w/1jMJgpYwLOOxL
ನಾನು ಎಲ್ಲೂ ಓಡಿ ಹೋಗಿಲ್ಲ. ನಿನ್ನೆ ಬಂದಂತಹ ದರ್ಶನ್ ಅವರ ಅಭಿಮಾನಿಗಳ ಜತೆಗೆ ರಾತ್ರಿ ಸಹ ಮಾತನಾಡಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ. ನಾನು ಗಂಡಸು. ಎಲ್ಲರನ್ನೂ ಎದುರಿಸಿದ್ದೇನೆ. ನಾನು ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ. ನನಗೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ರಾಜ್ಯಾದ್ಯಂತ 160ಕ್ಕೂ ಹೆಚ್ಚು ಅಭಿಮಾನಿ ಸಂಘಗಳಿವೆ. ಅವರೆಲ್ಲ ನಿನ್ನೆ ಆದಂತಹ ಘಟನೆಯಿಂದ ಬಹಳ ನೊಂದಿದ್ದಾರೆ. ದಯವಿಟ್ಟು ಇದನ್ನು ಇಲ್ಲೇ ಸಾಕು ಮಾಡಿ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಮತ್ತು ಶೋಗೆ ಮಾತ್ರ ನನ್ನ ಬದುಕು ಮೀಸಲು: ಆತ್ಮೀಯರೆ ನನಗೆ ನೀವು, ನಿಮಗೆ ನಾನು. ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಕಾರ್ಯಕ್ರಮಗಳಿಗೆ ನಾನು ಭೇಟಿ ನೀಡಲ್ಲ. ಮುಂದೆ ನನ್ನ ಸಿನಿಮಾ ಮತ್ತು ಶೋಗೆ ಮಾತ್ರ ನನ್ನ ಬದುಕು ಮೀಸಲು. ಕಾರಣ ತುಂಬ ತಾಮಸವಾಗಿದೆ. ನಮ್ಮರಂಗದಲ್ಲಿ ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ನಡೆದಿದೆ ಎಂದು ಟ್ವೀಟ್ ಮಾಡುವ ಮೂಲಕ ನಟ ಜಗ್ಗೇಶ್ ನೋವು ತೋಡಿಕೊಂಡಿದ್ದಾರೆ.